ಪ. ಬಂಗಾಳ ಉಪಚುನಾವಣೆ : ‘ಈ ಗೆಲುವು ಜನರ ಗೆಲುವಾಗಿದೆ , ಬಂಗಾಳವನ್ನು ಅಭಿವೃದ್ಧಿ ಪಥದಲ್ಲಿ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವುದಾಗಿ ನಾವು ಭರವಸೆ ನೀಡುತ್ತೇವೆ : ಮಮತಾ ಬ್ಯಾನರ್ಜಿ – Vishwanews24
ಪ. ಬಂಗಾಳ ಉಪಚುನಾವಣೆ : 4 ಕ್ಷೇತ್ರಗಳಲ್ಲಿ ಟಿಎಂಸಿ ಗೆಲುವು
‘ಈ ಗೆಲುವು ಜನರ ಗೆಲುವಾಗಿದೆ , ಬಂಗಾಳವನ್ನು ಅಭಿವೃದ್ಧಿ ಪಥದಲ್ಲಿ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವುದಾಗಿ ನಾವು ಭರವಸೆ ನೀಡುತ್ತೇವೆ : ಮಮತಾ ಬ್ಯಾನರ್ಜಿ – Vishwanews24
ಕೋಲ್ಕತ್ತ: ಪಶ್ಚಿಮ ಬಂಗಾಳದ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಜಯ ಗಳಿಸಿದೆ.
ಕೂಚ್‌ಬೆಹಾರ್ ಮತ್ತು ನಾದಿಯಾ ಜಿಲ್ಲೆಗಳ ದಿನ್‌ಹಟ, ಶಾಂತಿಪುರ ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ವಿರುದ್ಧ ಟಿಎಂಸಿ ಅಭ್ಯರ್ಥಿಗಳು ಭಾರಿ ಅಂತರದ ಗೆಲುವು ಸಾಧಿಸಿದ್ದಾರೆ. ಉತ್ತರ 24 ಪರಗಣ ಹಾಗೂ ದಕ್ಷಿಣ 24 ಪರಗಣ ಜಿಲ್ಲೆಗಳ ಖರ್‌ದಾಹ್ ಮತ್ತು ಗೊಸಬಾ ಕ್ಷೇತ್ರಗಳಲ್ಲಿ ಟಿಎಂಸಿ ಮತ್ತೆ ಜಯ ಗಳಿಸಿದೆ.
ಇದರೊಂದಿಗೆ, 294 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಟಿಎಂಸಿ ಸಂಖ್ಯಾಬಲ 215ಕ್ಕೆ ಹೆಚ್ಚಳವಾಗಿದೆ.
ಒಟ್ಟಾರೆ ಚಲಾವಣೆಯಾಗಿರುವ ಮತಗಳ ಪೈಕಿ ಟಿಎಂಸಿ ಶೇ 75.02 ಗಳಿಸಿದ್ದರೆ ಬಿಜೆಪಿಗೆ ಶೇ 14.48ರಷ್ಟು ಮಾತ್ರವೇ ದೊರೆತಿದೆ.
ಉಪಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಎಲ್ಲ ನಾಲ್ವರು ಅಭ್ಯರ್ಥಿಗಳಿಗೆ ಅಭಿನಂದನೆಗಳು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.
My heartiest congratulations to all the four winning candidates!
This victory is people's victory, as it shows how Bengal will always choose development and unity over propaganda and hate politics. With people's blessings, we promise to continue taking Bengal to greater heights!
— Mamata Banerjee (@MamataOfficial) November 2, 2021
‘ಈ ಗೆಲುವು ಜನರ ಗೆಲುವಾಗಿದೆ. ಪ್ರಚಾರ ಮತ್ತು ದ್ವೇಷದ ರಾಜಕೀಯಕ್ಕಿಂತ ಬಂಗಾಳವು ಯಾವಾಗಲೂ ಅಭಿವೃದ್ಧಿ, ಏಕತೆಯನ್ನು ಹೇಗೆ ಆರಿಸಿಕೊಳ್ಳುತ್ತದೆ ಎಂಬುದನ್ನು ಈ ಗೆಲುವು ತೋರಿಸಿಕೊಟ್ಟಿದೆ. ಜನರ ಆಶೀರ್ವಾದದೊಂದಿಗೆ, ಬಂಗಾಳವನ್ನು ಅಭಿವೃದ್ಧಿ ಪಥದಲ್ಲಿ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವುದಾಗಿ ನಾವು ಭರವಸೆ ನೀಡುತ್ತೇವೆ’ ಎಂದು ಅವರು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.
