ಫ್ರೀ ಕರೆಂಟ್ ಪಡೆಯಲು ಮನೆಗಳ ಕರಾರುಪತ್ರ ಕಡ್ಡಾಯ : ಇಂಧನ ಸಚಿವ ಕೆ.ಜೆ.ಜಾರ್ಜ್  – Vishwanews24

Featured, ರಾಜ್ಯ ನ್ಯೂಸ್

ಫ್ರೀ ಕರೆಂಟ್ ಪಡೆಯಲು ಮನೆಗಳ ಕರಾರುಪತ್ರ ಕಡ್ಡಾಯ : ಇಂಧನ ಸಚಿವ ಕೆ.ಜೆ.ಜಾರ್ಜ್ 

ಬೆಂಗಳೂರು : ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ಉಚಿತ ವಿದ್ಯುತ್ ಪಡೆಯಲು ಎಲ್ಲರೂ ಅರ್ಜಿ ಹಾಕಲೇಬೇಕು. ಜೊತೆಗೆ ಕರಾರು ಪತ್ರವೂ ಬೇಕು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಂತ ಮನೆಯಿರಲಿ, ಬಾಡಿಗೆ ಮನೆ ಇರಲಿ ಉಚಿತ ವಿದ್ಯುತ್ ಪಡೆಯಲು ಕರಾರು ಪತ್ರ ಬೇಕು.

ರಾಜ್ಯದಲ್ಲಿ 2.16 ಕೋಟಿ 200 ಯೂನಿಟ್ ಗಿಂತ ಕಡಿಮೆ ಬಳಕೆದಾರರಿದ್ದಾರೆ. 2.14 ಕೋಟಿ ಜನರಿಗೆ ಇದರ ಲಾಭ ಸಿಗಲಿದೆ. 200 ಯೂನಿಟ್ ವಿದ್ಯುತ್ ಬಳಕೆಗೆ ಯಾವುದೇ ಶುಲ್ಕ ಇರುವುದಿಲ್ಲ. 12 ತಿಂಗಳ ಸರಾಸರಿ ಆಧಾರದ ಮೇಲೆ 10% ಹೆಚ್ಚು ವಿದ್ಯುತ್ ಬಳಕೆ ಉಚಿತವಾಗಿರುತ್ತದೆ ಎಂದರು.

ಮನೆ ಯಜಮಾನಿ ಯಾರು ಎಂದು ಮನೆಯವರೇ ತೀರ್ಮಾನ ಮಾಡಬೇಕು : ಡಿಸಿಎಂ – Vishwanews24

ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪಡೆಯಲು ಗ್ರಾಹಕರು ಅರ್ಜಿ ಹಾಕಬೇಕು. ಸೇವಾಸಿಂಧು ಆಯಪ್ ನಲ್ಲಿ ಜನರು ಅರ್ಜಿ ಸಲ್ಲಿಸಬೇಕು. ಜುಲೈ ತಿಂಗಳ ಬಿಲ್ ಆಗಸ್ಟ್ ನಲ್ಲಿ ಪಾವತಿ ಮಾಡುವುದು ಬೇಡ ಎಂದು ಹೇಳಿದ್ದಾರೆ.

Leave a Reply