ಬಂಟ್ವಾಳದಲ್ಲಿ 800 ವರ್ಷದ ಹಿಂದಿನ ಮಸೀದಿ ಪುನರ್ ನಿರ್ಮಾಣ – ಸುಂದರವಾದ ಮಸೀದಿ ನಿರ್ಮಾಣಕ್ಕೆ ಮರ ನೀಡಿ ಸಾಮರಸ್ಯ ಮೆರೆದ ಹಿಂದೂಗಳು – Vishwanews24
ಬಂಟ್ವಾಳದಲ್ಲಿ 800 ವರ್ಷದ ಹಿಂದಿನ ಮಸೀದಿ ಪುನರ್ ನಿರ್ಮಾಣ – ಸುಂದರವಾದ ಮಸೀದಿ ನಿರ್ಮಾಣಕ್ಕೆ ಮರ ನೀಡಿ ಸಾಮರಸ್ಯ ಮೆರೆದ ಹಿಂದೂಗಳು
ದಕ್ಷಿಣ ಕನ್ನಡ : ಜಿಲ್ಲೆಯ ಬಂಟ್ವಾಳದಲ್ಲಿ 800 ವರ್ಷದ ಹಿಂದಿನ ಮಸೀದಿವೊಂದು ಪುನರ್ ನಿರ್ಮಾಣಗೊಂಡಿದ್ದು, ಈ ಮಸೀದಿ ನಿರ್ಮಾಣಕ್ಕೆ ಹಿಂದೂಗಳು ಸಹಾಯ ಮಾಡಿ, ಸಾಮರಸ್ಯದ ಮೆರೆದಿದ್ದಾರೆ ಎಂದು ವರದಿಯಾಗಿದೆ
ಕೋಮು ಸೂಕ್ಷ್ಮ ಪ್ರದೇಶ ಎಂದೇ ಪ್ರಸಿದ್ಧಿ ಪಡೆದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಮಸೀದಿ ನಿರ್ಮಾಣ ಊರಿನ ಜನರಾದ ಹಿಂದೂ ಸಹಾಯ ಹಸ್ತನೀಡಿದ್ದು, ಇದೀಗ ಭಾವೈಕ್ಯತೆಯ ಕೇಂದ್ರವಾಗಿದೆ.

ಮೂಲರಪಟ್ಣದ ಮೊಹಿಯದ್ದೀನ್ ಜುಮಾ ಮಸೀದಿಗೆ 800 ವರ್ಷಗಳ ಇತಿಹಾಸವಿದೆ. ಈ ನಿಟ್ಟಿನಲ್ಲಿ ಸುಂದರವಾದ ಮಸೀದಿ ನಿರ್ಮಾಣಕ್ಕೆ ಮರಗಳನ್ನು ಹಿಂದೂಗಳು ನೀಡಿದರೆ, ಹಿಂದೂ ಬಡಗಿ ರತ್ನಾಕರ್ ಕೆತ್ತನೆಯಲ್ಲಿ ಮಸೀದಿ ಆಕರ್ಷಕವಾಗಿ ಮೂಡಿ ಬಂದಿದ್ದು ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರ ಕೆತ್ತನೆಯನ್ನು ಮೆಚ್ಚಿ ಮಸೀದಿ ಆಡಳಿತ ಮಂಡಳಿ ರತ್ನಾಕರ್ ಅವರಿಗೆ ಐಫೋನ್ ಮತ್ತು ವಾಚ್ ಗಿಫ್ಟ್ ನೀಡಿ ಧನ್ಯವಾದ ಸಲ್ಲಿಸಿದ್ದಾರೆ. ಒಟ್ಟಾರೆಯಾಗಿ ಸೌಹಾರ್ದತೆ ಕದಡುತ್ತಿರುವ ಜಿಲ್ಲೆಯಲ್ಲಿ ಸಾಮರಸ್ಯದ ಮೂಡಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಂತೂ ನಿಜ.

ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್ನ 100ನೇ ಸಂಚಿಕೆ ವಿಶ್ವಾದ್ಯಂತ ಪ್ರಸಾರ – Vishwanews24
