ಬಂಟ್ವಾಳ: ಜನಪರವಾದ ಅನೇಕ ಯೋಜನೆಗಳನ್ನು ಆರಂಭ ಮಾಡಿದ್ದೇ ಕಾಂಗ್ರೇಸ್ ಪಕ್ಷ : ರಮಾನಾಥ ರೈ – vishwanews24
ಬಂಟ್ವಾಳ:ಜನರಿಗೆ ಮೋಸ ಮಾಡಿ, ಸುಳ್ಳು ಹೇಳಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ : ಬಿ.ರಮಾನಾಥ ರೈ
ಬಂಟ್ವಾಳ : ಭೂ ಒಡೆತನ, ಹಕ್ಕುಪತ್ರ ನಿವೇಶನ ಸಹಿತ ಜನಪರವಾದ ಅನೇಕ ಯೋಜನೆಗಳನ್ನು ಆರಂಭ ಮಾಡಿದ್ದೇ ಕಾಂಗ್ರೇಸ್ ಪಕ್ಷ. ಆದರೆ ಸುಳ್ಳು ಆರೋಪಗಳಲ್ಲೇ ಮುಳುಗಿರುವ ಬಿಜೆಪಿ ಧರ್ಮ ದೇಶ ಅಂತ ಹೇಳಿ ಹೀಗೆ ಬೇರೆ ರೀತಿಯಲ್ಲಿ ಜನರನ್ನು ಮೋಸ ಮಾಡಿ, ಸುಳ್ಳು ಹೇಳಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆರೋಪಿಸಿದ್ದಾರೆ.
ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಸಮಿತಿ, ಬಿ.ಮೂಡ ವಲಯ ಕಾಂಗ್ರೇಸ್ ಸಮಿತಿಯ ಆಶ್ರಯದಲ್ಲಿ ಬಿ.ಸಿ. ರೋಡಿನಲ್ಲಿ ಗುರುವಾರ ನಡೆದ ಜನಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ ಅವಧಿಯ ಚುನಾವಣಾ ಸಂದರ್ಭದಲ್ಲಿ ಕಾನೂನು ಬಾಹಿರವಾಗಿ ಹಕ್ಕು ಪತ್ರ ನೀಡಿದೆ. ಬಿಪಿಎಲ್ ಕಾರ್ಡ್ ರದ್ದುಮಾಡಿ ಜನರಿಗೆ ಅನ್ಯಾಯ ಮಾಡಿದ್ದು ಬಿಜೆಪಿ ಸರ್ಕಾರ. ಋಣಮುಕ್ತ ಕಾರ್ಯಕ್ರಮ ಮಾಡಿದ್ದೇ ಕಾಂಗ್ರೆಸ್ ಚರಿತ್ರೆಯಾಗಿದೆ, ಸರ್ಕಾರಗಳು ದಿವಾಳಿಯಾಗುವುದು ಬಡವರಿಗೆ ನೀಡುವ ಕಾರ್ಯಕ್ರಮಗಳಿಂದ ಅಲ್ಲ, ಬಂಡವಾಳ ಶಾಹಿಗಳಿಗೆ ಬ್ಯಾಂಕ್ ಸಾಲ ನೀಡಿ ಮನ್ನಾ ಮಾಡಿದ್ದೀರಿಲ್ಲ ನೀವು. ಅದರಿಂದ ದೇಶ ದಿವಾಳಿಯಾಗುವ ಸಾಧ್ಯತೆಗಳಿವೆ ಎಂದರು.
ಮಂಗಳೂರು: ಆಶ್ರಮದಿಂದ ಯುವತಿ ನಾಪತ್ತೆ ; ಪೋಲಿಸರಿಂದ ಲುಕ್‌ಔಟ್ ನೋಟಿಸ್ – vishwanews24
