ಬಂಡಾಯ ಅಭ್ಯರ್ಥಿ ರಘುಪತಿ ಭಟ್ ಪರ ಬ್ಯಾಟ್ ಬಿಸಿದ ಶೆಟ್ಟರ್ : ಬಿಜೆಪಿಯಿಂದ ಅನ್ಯಾಯವಾಗಿದ್ದು ನಿಜ vishwanews24 -Bharath
ಬಂಡಾಯ ಅಭ್ಯರ್ಥಿ ರಘುಪತಿ ಭಟ್ ಪರ ಬ್ಯಾಟ್ ಬಿಸಿದ ಶೆಟ್ಟರ್ : ಬಿಜೆಪಿಯಿಂದ ಅನ್ಯಾಯವಾಗಿದ್ದು ನಿಜ :vishwanews24
ಬೆಂಗಳೂರು : ಮಾಜಿ ಶಾಸಕ ರಘುಪತಿ ಭಟ್ ಅವರಿಗೆ ಬಿಜೆಪಿಯಿಂದ ಅನ್ಯಾಯವಾಗಿದ್ದು ನಿಜ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್ ಪರ ಬ್ಯಾಟ್ ಬೀಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೂಡ ಅವರಿಗೆ ಟಿಕೆಟ್ ಸಿಗಬೇಕಾಗಿತ್ತು ಪಕ್ಷಕ್ಕಾಗಿ ಭಾರಿ ಕೆಲಸ ಮಾಡಿದ್ದಾರೆ ನಾನು ಕೂಡ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯ ಮಾಡಿದ್ದೆ ಕೋರ್ ಕಮಿಟಿಯಲ್ಲೂ ಕೂಡ ಆಗ್ರಹ ಮಾಡಿದ್ದನು ಆದರೆ ಕಳೆದ ಕಡೆ ಕ್ಷಣದಲ್ಲಿ ಟಿಕೆಟ್ ಮಿಸ್ ಆಯಿತು ತದನಂತರ ಅವರು ಸುಮ್ಮನಿರದೇ ಪಾರ್ಟಿಗಾಗಿ ಸಮಯವನ್ನು ಮೀಸಲಿಟ್ಟಿದ್ದಾರೆ ಮಾತ್ರವಲ್ಲದೆ ಪದವೀಧರ ಚುನಾವಣೆಗೆ ಸಂಬಂಧಪಟ್ಟಂತೆ ಅತಿ ಹೆಚ್ಚು ಮತದಾರರ ನೋಂದಾವಣಿ ಕೂಡ ಮಾಡಿದ್ದಾರೆ ಈ ಸಮಯದಲ್ಲೂ ಅವರಿಗೆ ಟಿಕೆಟ್ ಸಿಕ್ಕದಿರುವುದು ಅತ್ಯಂತ ಬೇಸರವಾಗಿದೆ ಮುಂದಿನ ದಿನದಲ್ಲಿ ಅವರಿಗೆ ಸೂಕ್ತ ಸ್ಥಾನಮಾನ ಸಿಗುವ ಬಗ್ಗೆ ಆಲೋಚನೆ ಮಾಡುತ್ತೇವೆ ಎಂದು ಅವರು ಹೇಳಿದರು.
