ಬಜೆಟ್ : ‘ಅನ್ನದಾತ ಇನ್ಮುಂದೆ ವಿದ್ಯುತ್‌ದಾತ’ : ನಿರ್ಮಲಾ ಸೀತಾರಾಮನ್ -Vishwanews24

Featured, ರಾಷ್ಟ್ರ ನ್ಯೂಸ್


ನವದೆಹಲಿ : ದೇಶದ ಆರ್ಥಿಕತೆಯ ಕಠಿಣ ಪರಿಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ 2ರ ಮೊದಲ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಮಂಡನೆ ಮಾಡುತ್ತಿದ್ದಾರೆ.

ಇನ್ನು ಬಜೆಟ್‌ಗೂ ಮುನ್ನ ಮಾತನಾಡಿದ ವಿತ್ತ ಸಚಿವೆ ಅವರು 40 ಕೋಟಿ ಜನರು ಈ ಬಾರಿ ಜಿಎಸ್ ಟಿ ಪಾವತಿಸಿದ್ದಾರೆ. ಜಿಎಸ್ ಟಿಯಿಂದ ರಿಟರ್ನ್ಸ್ ಸಲ್ಲಿಕೆ ತುಂಬಾ ಸರಳವಾಗಿದೆ ಅಂಥ ಹೇಳಿದರು. ಇನ್ನು ಜಿಎಸ್‌ಟಿಯ ಜಾರಿಯಲ್ಲಿ ಮಾಜಿ ವಿತ್ತ ಸಚಿವ ಅರುಣ್‌ ಜೇಟ್ಲಿ ಅವರ ಕಾರ‍್ಯವನ್ನು ನೆನಪು ಮಾಡಿಕೊಂಡರು. ಇನ್ನು ಭಾರತ ಜಗತ್ತಿನ 5ನೇ ಅತೀ ದೊಡ್ಡ ಆರ್ಥಿಕ ದೇಶವಾಗಿದೆ ಅಂತ ಹೇಳಿದರು.

ಇನ್ನು ಬಜೆಟ್‌ ಮಂಡನೆ ಮಾಡುತ್ತ ಮಾತನಾಡಿದ ಅವರು 2020 ರ ವೇಳೇಗೆ ರೈತರ ಆದಾಯವನ್ನು ದ್ವಿಗುಣ ಗೊಳಿಸುವುದಕ್ಕೆ ಕೇಂದ್ರ ಸರಕಾರ ಬದ್ದವಾಗಿದೆ ಅಂತ ಹೇಳಿದರು. ಕೃಷ್ಟಿ ಅಭಿವೃದ್ದಿಗೆ 16 ಅಂಶಗಳ ಯೋಜನೆ ಮಾಡಲಾಗಿದೆ ಅಂತ ಹೇಳಿದರು. 20 ಲಕ್ಷ ರೈತರಿಗೆ ಪಂಪ್‌ಸೆಟ್‌ ವಿತರಣೆ ಮಾಡಲಾಗುವುದು ಅಂಥ ಹೇಳಿದರು. ಬರಡು ಭೂಮಿಯಲ್ಲಿ ವಿದ್ಯುತ್‌ ಉತ್ಪಾದನೆ ಮಾಡುವುದಕ್ಕೆ ಹೆಚ್ಚಿನ ಅವಕಾಶ ನೀಡಲಾಗುವುದು ಈ ಮೂಲಕ ಅನ್ನದಾತ ವಿದ್ಯುತ್‌ದಾತನೂ ಆಗುತ್ತಾನೆ ಅಂಥ ಹೇಳಿದರು.