ಬಡವರ ಪಾಲಿಗೆ ದಾರಿದೀಪವಾಗುತ್ತಿರುವ ಧರ್ಮದರ್ಶಿ ಭಾಸ್ಕರ್ ಪೂಜಾರಿ ಗುಂಡಿಬೈಲ್.
ಬಡವರ ಪಾಲಿಗೆ ದಾರಿದೀಪವಾಗುತ್ತಿರುವ ಧರ್ಮದರ್ಶಿ ಭಾಸ್ಕರ್ ಪೂಜಾರಿ ಗುಂಡಿಬೈಲ್.
ಉಡುಪಿ: ಶ್ರೀ ಕ್ಷೇತ್ರ ಮೂಡುಸಗ್ರಿ ತುಳುನಾಡಿನ ಅನೇಕ ಕಾರಣಿಕ ದೈವಾಲಯಗಳಲ್ಲಿ ಒಂದಾಗಿದ್ದು ಇಲ್ಲಿನ ಧರ್ಮದರ್ಶಿ ಭಾಸ್ಕರ್ ಪೂಜಾರಿ ಗುಂಡಿಬೈಲ್ ಜನ ಸೇವೆಯೆ ದೇವರ ಸೇವೆ ಎಂಬ ನಿಟ್ಟಿನಲ್ಲಿ ಪ್ರತಿ ವಾರವೂ ಬಡವರಿಗೆ ಅಶಕ್ತರಿಗೆ ಸಹಕಾರ ತೋರುವಲ್ಲಿ ನಿರತರಾಗಿದ್ದಾರೆ.

ರಂಗಕರ್ಮಿಯೂ ಆಗಿರುವ ಭಾಸ್ಕರ್ ಪೂಜಾರಿ ಕಲಾವಿದರ ಆರೈಕೆ ಜತೆಗೆ ಧನಸಹಾಯವೂ ಮಾಡುತ್ತ ಬಂದಿರುತ್ತಾರೆ.ಶ್ರೀ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಅತ್ಯಂತ ಪ್ರೀತಿಯಿಂದ ಗೌರವದಿಂದ ನಡೆಸಿಕೊಂಡು ಅವರವರ ಕಷ್ಟಗಳಿಗೆ ಸ್ಪಂದಿಸುತ್ತಿರುವ ಈ ಕಾರ್ಯ ಜನಮೆಚ್ಚುಗೆ ಪಡೆದಿದೆ.ತಾನು ದುಡಿದ ಹಣದಲ್ಲಿ ಬಡಜನರ ಆರೋಗ್ಯ, ಶಿಕ್ಷಣ. ಅನಾಥಶ್ರಮ,ಕಲಾವಿದರಿಗೂ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ.

ಬಡ ಹೆಣ್ಣು ಮಕ್ಕಳ ಮದುವೆ ಕಾರ್ಯಕ್ರಮಗಳಿಗೆ ,ಸೂರು ಇಲ್ಲದ ಕುಟುಂಬಗಳಿಗೆ ವಿಶೇಷವಾಗಿ ಸ್ಪಂದಿಸುವ ಭಾಸ್ಕರ ಪೂಜಾರಿ ಗುಂಡಿಬೈಲ್ ಕಾರ್ಯ ಶ್ಲಾಘನೀಯವಾಗಿದೆ. ಪ್ರಚಾರದ ಗುಂಗಿಲ್ಲದೆ ತಾನು ಮಾಡುವ ಕಾರ್ಯ ದೇವರ ಕಾರ್ಯ ಎಂಬ ನಿಟ್ಟಿನಲ್ಲಿ ಮಾಡುತ್ತಿದ್ದಾರೆ.
#vishwanews24
