ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ : ವಿಶ್ವಶಾಂತಿಗಾಗಿ ದೇವರಿಗೆ ಮೊರೆಯಿಡುವುದಷ್ಟೆ ನಮ್ಮ ಮುಂದಿರುವ ಆಯ್ಕೆ  : ಪೇಜಾವರ ಶ್ರೀ – vishwanews24

Featured, ಉಡುಪಿ

ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ : ವಿಶ್ವಶಾಂತಿಗಾಗಿ ದೇವರಿಗೆ ಮೊರೆಯಿಡುವುದಷ್ಟೆ ನಮ್ಮ ಮುಂದಿರುವ ಆಯ್ಕೆ  : ಪೇಜಾವರ ಶ್ರೀ

ಉಡುಪಿ: ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಕಂಡು ತುಂಬ ಖೇದವಾಗಿದೆ. ಇಡೀ ಹಿಂದೂ ಸಮಾಜ ಜಾಗೃತವಾಗಬೇಕು ಮತ್ತು ವಿಶ್ವಶಾಂತಿಗಾಗಿ ದೇವರಿಗೆ ಮೊರೆಯಿಡುವುದಷ್ಟೆ ನಮ್ಮ ಮುಂದಿರುವ ಆಯ್ಕೆ ಎಂದು ಪೇಜಾವರ ಸ್ವಾಮಿ ಹೇಳಿದರು.

ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ವಿಡಿಯೋ ಮೂಲಕ ಕಳವಳ ವ್ಯಕ್ತಪಡಿಸಿರುವ ಅವರು, ನಮ್ಮ ದೇಶದಲ್ಲಿರುವ ಎಲ್ಲ ಹಿಂದೂಗಳು ಕೂಡ ಅತ್ಯಂತ ಕಳವಳ ಪಡಬೇಕಾದ ಸ್ಥಿತಿಯಿದು. ಇವತ್ತು ಪಕ್ಕದ ದೇಶದಲ್ಲಿ ಅಷ್ಟ ಅಲ್ಲದೆ ಸ್ವದೇಶದಲ್ಲೂ ಹಿಂದೂಗಳ ಮೇಲಿನ ಆಕ್ರಮಣ ಅತಿಯಾಗಿದೆ. ಅದರ ವಿರುದ್ಧವಾಗಿ ಸೊಲ್ಲೆತ್ತುವವರನ್ನು ಕೂಡ ಧಮನಿಸುವ ಪ್ರವೃತ್ತಿಯನ್ನು ಕಾಣುತ್ತಿದ್ದೇವೆ.

ಉಡುಪಿ : ಪ್ಲಾಸ್ಟಿಕ್‌ನಿಂದ ತಯಾರಿಸಿದ ರಾಷ್ಟ್ರ ಧ್ವಜಗಳ ಬಳಕೆ ನಿಷೇಧ – vishwanews24

ಈ ನೆಲೆಯಲ್ಲಿ ಸಮಾಜದ ಎಲ್ಲರೂ ಜಾಗೃತರಾಬೇಕು. ಸರಕಾರವನ್ನು ಕೂಡ ಆಶ್ರಯಿಸುವ ಹಂತದಲ್ಲಿಲ್ಲ. ದೇವರಿಗೆ ಶರಣಾಗಿ ಸಮಾಜ, ದೇಶ, ವಿಶ್ವದಲ್ಲಿ ಶಾಂತಿ, ಸುಭಿಕ್ಷೆ ನೆಲೆಸುವಂತೆ ಬೇಡೋಣ ಎಂದು ಕರೆ ಕೊಟ್ಟಿದ್ದಾರೆ.

Leave a Reply