ಬಾಲಕಿಯರೊಂದಿಗೆ ಅಸಭ್ಯ ವರ್ತನೆ ; ಮಲಯಾಳಂ ನಟ ಶ್ರೀಜಿತ್‌ ರವಿ ಪೊಲೀಸ್ ವಶಕ್ಕೆ – Vishwanews24

Featured, ರಾಷ್ಟ್ರ ನ್ಯೂಸ್

ಬಾಲಕಿಯರೊಂದಿಗೆ ಅಸಭ್ಯ ವರ್ತನೆ ; ಮಲಯಾಳಂ ನಟ ಶ್ರೀಜಿತ್‌ ರವಿ ಪೊಲೀಸ್ ವಶಕ್ಕೆ

ತಿರುವನಂತಪುರ : ಅಯ್ಯಂತೊಳೆ ಎಸ್‌ಎನ್‌ ಪಾರ್ಕ್‌ನಲ್ಲಿ ಸಾರ್ವಜನಿಕವಾಗಿ ಬಾಲಕಿಯರ ಮುಂದೆ ಗುಪ್ತಾಂಗ ಪ್ರದರ್ಶನ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಮಲಯಾಳಂ ನಟ ಶ್ರೀಜಿತ್ ರವಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿ, ಶ್ರೀಜಿತ್‌ ರವಿ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ತ್ರಿಶೂರ್ ಪಶ್ಚಿಮ ವಿಭಾಗದ ಪೊಲೀಸರು ತಿಳಿಸಿದ್ದಾರೆ.

ಇನ್ನು 2016ರಲ್ಲಿ ಪಾಲಕ್ಕಾಡ್ ಪೊಲೀಸರು ಇಂತಹದೇ ಪ್ರಕರಣದಲ್ಲಿ ರವಿಯನ್ನು ಬಂಧಿಸಿದ್ದರು ಎನ್ನಲಾಗಿದೆ.

ಬಂಟ್ವಾಳ : ಭಾರೀ ಮಳೆಗೆ ಮನೆ ಮೇಲೆ ಗುಡ್ಡ ಕುಸಿತ : ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ – Vishwanews24

Leave a Reply