ಬಾಲಿವುಡ್ ನಟಿ ಮಹಿಮಾ ಚೌಧರಿಗೆ ಸ್ತನ ಕ್ಯಾನ್ಸರ್ – Vishwanews24
ಬಾಲಿವುಡ್ ನಟಿ ಮಹಿಮಾ ಚೌಧರಿಗೆ ಸ್ತನ ಕ್ಯಾನ್ಸರ್ – Vishwanews24
ನವದೆಹಲಿ: ಬಾಲಿವುಡ್ ನಟಿ ಮಹಿಮಾ ಚೌಧರಿ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ.
ಅನುಪಮ್ ಖೇರ್ ಈ ವಿಷಯವನ್ನು ತಿಳಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ತಮ್ಮ ಇನ್ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಮಹಿಮಾ ಅವರ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸುವಂತೆ ಅಭಿಮಾನಿಗಳಿಗೆ ಹೇಳಿದ್ದಾರೆ.
ತಲೆ ಕೂದಲು ಉದುರಿ ಮುಂಭಾಗ ಕುಳಿತಿರುವ ಮಹಿಮಾ ಚೌಧರಿ ಅವರ ವಿಡಿಯೋವೊಂದನ್ನು ಅನುಪಮ್ ಖೇರ್ ಶೇರ್ ಮಾಡಿದ್ದಾರೆ. ನನ್ನ 525ನೇ ಚಿತ್ರ ದಿ ಸಿಗ್ನೇಚರ್ ಚಿತ್ರಕ್ಕೆ ಮಹಿಮಾ ಚೌಧರಿ ಅವರನ್ನು ಮಾತನಾಡಿಸಿದಾಗ, ಅವರು ತನಗೆ ಸ್ತನ ಕ್ಸಾನರ್ ಇರುವುದಾಗಿ ತಿಳಿಸಿರುವುದಾಗಿ ಹೇಳಿದ್ದಾರೆ.

ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುವಾಗ ಅವರು ಎಷ್ಟು ಧೈರ್ಯವಂತೆ ಅಂತಾ ತಿಳಿದು ನನಗೆ ಆಶ್ಚರ್ಯವಾಯಿತು. ಮಹಿಳಾ ಈ ವಿಷಯದಲ್ಲಿ ಅನೇಕ ಹೆಣ್ಣು ಮಕ್ಕಳಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ. ನಮ್ಮ ರಿಯಲ್ ಹೀರೋ, ನೀವು ಬೇಗ ಗುಣಮುಖರಾಗಲಿ ಎಂದು ನಾವೆಲ್ಲರೂ ಪ್ರಾರ್ಥಿಸುತ್ತೇವೆ ಎಂದು ಅನುಪಮ್ ಖೇರ್ ಬರೆದುಕೊಂಡಿದ್ದಾರೆ.
