ಬಿಎಸ್‌ವೈ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡ ಸುಮಲತಾ ಅಂಬರೀಶ್‌  : Vishwanews24

Featured, ರಾಜ್ಯ ನ್ಯೂಸ್

ಬಿಎಸ್‌ವೈ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡ ಸುಮಲತಾ ಅಂಬರೀಶ್‌ 

ಬೆಂಗಳೂರು: ನಟಿ, ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌  ಅವರು ಇಂದು ಭಾರತೀಯ ಜನತಾ ಪಕ್ಷ (BJP)ಕ್ಕೆ ಸೇರ್ಪಡೆಗೊಂಡಿದ್ದಾರೆ.

ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುಮಲತಾ ಅವರಿಗೆ ಪಕ್ಷದ ಬಾವುಟ ನೀಡಿ ಬಿಜೆಪಿ ನಾಯಕರು ಪಕ್ಷಕ್ಕೆ ಬರಮಾಡಿಕೊಂಡರು. ಬಳಿಕ ರಾಧಾಮೋಹನ್ ದಾಸ್ ಅಗರವಾಲ್ ಅವರು ಸುಮಲತಾರಿಗೆ ಪಕ್ಷದ ಪ್ರಾಥಮಿಕ ಸದಸ್ಯತ್ವದ ಪತ್ರ ನೀಡಿದರು.

ಇಂದಿನಿಂದ ಹೊಸ ಅಧ್ಯಾಯ ಆರಂಭ  : ಸುಮಲತಾ ಅಂಬರೀಶ್‌ – Vishwanews24

ಸುಮಲತಾ ಅಂಬರೀಶ್ ಜೊತೆಗೆ ದೊಡ್ಡ ಗಣೇಶ್, ಕೊಪ್ಪಳ ಮಾಜಿ ಸಂಸದ ಎಸ್ ಶಿವರಾಮೇಗೌಡ (ಕಾಂಗ್ರೆಸ್ ತೊರೆದು ಬಿಜೆಪಿ ಸೆರ್ಪಡೆ), ಸಚಿವ ಶಿವಾನಂದ ಪಾಟೀಲ್ ಸಂಬಂಧಿ ಹರ್ಷಗೌಡ ಪಾಟೀಲ್, ಹಳಿಯಾಳದ ಶ್ರೀನಿವಾಸ್ ಹಾಗೂ ಹಳಿಯಾಳದ ತುಕಾರಾಂ ಗೌಡ ಪಾಟೀಲ್ ಬಿಜೆಪಿಗೆ ಸೇರಿದರು.

ಬಿ.ಎಸ್‌ ಯಡಿಯೂರಪ್ಪ, ಬಿ.ವೈ ವಿಜಯೇಂದ್ರ, ಆರ್‌ ಅಶೋಕ್, ಡಿ.ವಿ ಸದಾನಂದ ಗೌಡ, ಸಿ.ಟಿ ರವಿ, ಕೆ.ಸಿ ನಾರಾಯಣ ಗೌಡ, ಮುನಿರತ್ನ ಹಾಗೂ ಮಂಡ್ಯ ಬಿಜೆಪಿ ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಹನುಮಾನ್‌ ಚಾಲೀಸಾ ಪ್ರಕರಣ : ಹಲ್ಲೆಗೊಳಗಾದ ಅಂಗಡಿ ಮಾಲೀಕನ ವಿರುದ್ಧವೇ ಎಫ್‌ಐಆರ್‌ ದಾಖಲು – Vishwanews24

Leave a Reply