ಬಿಎಸ್ ವೈ ಅವರು ಎಷ್ಟು ದಿನ ಅಧಿಕಾರ ನಡೆಸುತ್ತಾರೆ ಎಂಬುವುದನ್ನು ನಾವು ಕೂಡ ನೋಡುತ್ತೇವೆ : ಡಿ.ಕೆ.ಶಿ -Vishwanews24
ನವದೆಹಲಿ: .ಮೈತ್ರಿ ಸರಕಾರವನ್ನು ಛಲದಿಂದ ಕೆಳಗಿಳಿಸಿದ ಯಡಿಯೂರಪ್ಪ ಅವರು ಎಷ್ಟು ದಿನ ಅಧಿಕಾರ ನಡೆಸುತ್ತಾರೆ ಎಂಬುವುದಾನ್ನು ನಾವು ಕೂಡ ನೋಡುತ್ತೇವೆ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಗುಡುಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜುಲೈ 31 ರೊಳಗೆ ಹಣಕಾಸು ಮಸೂದೆಗಳಿಗೆ ಅಂಗೀಕಾರ ದೊರೆಯಬೇಕಿದೆ. ಇದಕ್ಕೆ ಕಾಂಗ್ರೆಸ್ ಅಡ್ಡಿಪಡಿಸುವುದಿಲ್ಲ.
ಯಡಿಯೂರಪ್ಪ ಅತೃಪ್ತ ಶಾಸಕರಿಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದಾರೆ. ಆದರೆ ಬಿಜೆಪಿ ಪಕ್ಷದಲ್ಲೇ ಸಚಿವ ಆಕಾಂಕ್ಷಿಗಳಾ ಸಂಖ್ಯೆ ಹೆಚ್ಚಿರುವರಾಗ ಅತೃಪ್ತರಿಗೆ ಹೇಗೆ ಸಚಿವ ಸ್ಥಾನ ನೀಡಲಿದ್ದಾರೆ ಎಂಬುವುದು ಗೊತ್ತಿಲ್ಲ ಎಂದಿದ್ದಾರೆ.
ಬಿಜೆಪಿಯಲ್ಲಿ ಹಿರಿಯ ವ್ಯಕ್ತಿಗಳಿಗೆ ಸ್ಥಾನಮಾನವಿಲ್ಲ. 75 ವರ್ಷ ದಾಟಿದವರನ್ನು ಮೂಲೆಗುಂಪು ಮಾಡಲಾಗುತ್ತಿದೆ.ಹೀಗಿರುವಾಗ 75 ವರ್ಷ ದಾಟಿದ ಯಡಿಯೂರಪ್ಪ ಅವರಿಗೆ ಮಾತ್ರ ಬಿಜೆಪಿ ನಾಯಕರು ವಿಶೇಷ ವಿನಾಯಿತಿ ನೀಡಿದ್ದಾರೆ ಎಂಬ ಸದ್ದು ಬಿಜೆಪಿ ಪಾಳಯದಲ್ಲಿ ಮೊಳಗಿದೆ ಎಂದರು.

