ಬಿಜೆಪಿಯನ್ನ ಬಿಜೆಪಿ ಅಂತಾ ಕರೆಯಬೇಕಾ ಅಥವಾ ಮೋದಿ ಪಕ್ಷ ಅಂತಾ ಕರೆಯಬೇಕಾ ಗೊತ್ತಿಲ್ಲ : ಎಚ್.ಡಿ ದೇವೇಗೌಡ – VIshwanews24
ಬಿಜೆಪಿಯನ್ನ ಬಿಜೆಪಿ ಅಂತಾ ಕರೆಯಬೇಕಾ ಅಥವಾ ಮೋದಿ ಪಕ್ಷ ಅಂತಾ ಕರೆಯಬೇಕಾ ಗೊತ್ತಿಲ್ಲ : ಎಚ್.ಡಿ ದೇವೇಗೌಡ – Vishwanews24
ಕಲಬುರಗಿ: ಬಿಜೆಪಿಯನ್ನ ಬಿಜೆಪಿ ಅಂತಾ ಕರೆಯಬೇಕಾ ಅಥವಾ ಮೋದಿ ಪಕ್ಷ ಅಂತಾ ಕರೆಯಬೇಕಾ ಗೊತ್ತಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹೇಳಿದರು.
ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿಯಲ್ಲಿ ಜೆಡಿಎಸ್ ಪಕ್ಷಕ್ಕೆ ಇನ್ನೂ ಶಕ್ತಿ ತುಂಬಬೇಕು. 2023 ಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ನವರು ಜೆಡಿಎಸ್ ಪಕ್ಷವನ್ನ ಸಂಪೂರ್ಣ ನಾಶ ಮಾಡುತ್ತೇವೆ ಅಂತಾ ಹೇಳುತ್ತಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ಒಂದಕ್ಕೆ ಶಕ್ತಿ ಕಡಿಮೆ ಇದೆ. ಕಾಂಗ್ರೆಸ್ ಎರಡು ರಾಜ್ಯದಲ್ಲಿ ಮಾತ್ರ ಅಧಿಕಾರದಲ್ಲಿ ಇದೆ. 5 ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಎಷ್ಟು ಬೆಳೆಯುತ್ತೆ ಅನ್ನೋದು ಹೇಳೋಕೆ ಆಗುವುದಿಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ರಾಷ್ಟ್ರೀಯ ಪಕ್ಷ ಕಾಂಗ್ರೆಸ್, ಈಗ ಯಾವ ರಾಜ್ಯದಲ್ಲಿಯೂ ಇಲ್ಲ. ಇದಕ್ಕೆ ಕಾರಣ ಯಾರು ಅಂತಾ ಅವರೇ ಹುಡುಕಬೇಕು ಎಂದು ವ್ಯಂಗ್ಯವಾಡಿದರು.
ಮಂಗಳೂರು : 2023ರ ವರ್ಷ ಸಂಪೂರ್ಣ ಕಾಂಗ್ರೆಸ್ ವರ್ಷ : ಡಿ ಕೆ ಶಿ – Vishwanews24
ಇವತ್ತು ಬಿಜೆಪಿಯನ್ನ ಬಿಜೆಪಿ ಅಂತಾ ಕರೆಯಬೇಕಾ ಅಥವಾ ಮೋದಿ ಪಕ್ಷ ಅಂತಾ ಕರೆಯಬೇಕಾ ಗೊತ್ತಿಲ್ಲ. ಯಾಕೆಂದರೆ ಬಿಜೆಪಿ ಪಕ್ಷದಲ್ಲಿದ್ದವರು ಮೋದಿ ಹೆಸರಿನಲ್ಲೇ ಚುನಾವಣೆ ಮಾಡುತ್ತಿದ್ದಾರೆ. ಅದಕ್ಕಾಗಿ ನಾನು ಮೋದಿ ಪಾರ್ಟಿ ಅಂತಾ ಕರೆಯುತ್ತೇನೆ. ಒಬ್ಬ ವ್ಯಕ್ತಿಯ ಸಕ್ಸಸ್ ನಲ್ಲಿ ಪಾರ್ಟಿ ನಡೆಯುತ್ತಿದೆ. ಆದರೆ ಮುಂದೇನು ಆಗುತ್ತೋ ಅದು ನನಗೆ ಗೊತ್ತಿಲ್ಲ ಎಂದು ಟಾಂಗ್ ನೀಡಿದರು.
ಬೆಂಗಳೂರು : ವೀಕೆಂಡ್ ಕರ್ಪ್ಯೂ : ಜನಸಾಮಾನ್ಯರಿಗೆ ಬಿಎಂಟಿಸಿ ಬಸ್ ಸಂಚಾರ ಲಭ್ಯವಿರೋದಿಲ್ಲ – Vishwanews24
