ಬಿಜೆಪಿಯ ಬಿ.ವೈ.ರಾಘವೇಂದ್ರ ಒರಿಜಿನಲ್​ ಅಭ್ಯರ್ಥಿ ; ಮಧು ಬಂಗಾರಪ್ಪ ಡೂಪ್ಲಿಕೇಟ್​ ಅಭ್ಯರ್ಥಿ : ಸೋದರನ ವಿರುದ್ಧ ಕುಮಾರ್ ಬಂಗಾರಪ್ಪ – Vishwanews24

Featured, ರಾಜ್ಯ ನ್ಯೂಸ್

ಶಿವಮೊಗ್ಗ: ಲೋಕಸಭಾ ಚುನಾವಣೆಯ ಈ ಕ್ಷೇತ್ರದಲ್ಲಿ ಬಿಜೆಪಿಯ ಬಿ.ವೈ.ರಾಘವೇಂದ್ರ ಒರಿಜಿನಲ್​ ಅಭ್ಯರ್ಥಿ. ಮಧು ಬಂಗಾರಪ್ಪ ಡೂಪ್ಲಿಕೇಟ್​ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಸೋದರನ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ಮಧು ಬಂಗಾರಪ್ಪ ಸ್ವಂತ ಅಣ್ಣನನ್ನೇ ಮಾತನಾಡಿಸುವುದಿಲ್ಲ. ಬದಲಿಗೆ ಡಿ.ಕೆ.ಶಿವಕುಮಾರ್​, ಎಚ್​.ಡಿ.ಕುಮಾರಸ್ವಾಮಿ ಅವರಂಥ ಡೂಪ್ಲಿಕೇಟ್​ಗಳನ್ನು ಅಣ್ಣ ಎನ್ನುತ್ತಿದ್ದಾರೆ. ಮಧು ಬಂಗಾರಪ್ಪ ಇನ್ನೂ ಪ್ಯಾಕೇಜ್​ ಟೂರ್​ನಲ್ಲಿದ್ದಾರೆ. ಅವರು ಅಲ್ಲಿಂದ ಬರುವುದೇ ಬೇಡ. ನಾವು ಅವರನ್ನು ಸೋಲಿಸುವುದು ಗ್ಯಾರಂಟಿ ಎಂದರು.

ಕಾಗೋಡು ತಿಮ್ಮಪ್ಪನವರಿಂದ ಕೆಲಸ ಕಲಿತಿದ್ದೇನೆ. ಆದರೆ, ಈಗ ಅವರು ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್​ ಮುಗಿಸಿ ದೇವೇಗೌಡರ ಪಾದಕ್ಕೆ ಅರ್ಪಿಸಿದ್ದಾರೆ. ಇಂಥ ರಾಜಕಾರಣಿಗಳು ಮುಂದಿನ ಪೀಳಿಗೆಗೆ ಹೇಗೆ ಆದರ್ಶವಾಗುತ್ತಾರೆ ಎಂದು ಪ್ರಶ್ನಿಸಿದರು.

ನಿಖಿಲ್​ ಎಲ್ಲಿದಿಯಪ್ಪಾ ಎಂದು ಆಡಿಯೋ ರಿಲೀಸ್​ ಕಾರ್ಯಕ್ರಮದಲ್ಲಿ ಬೂಟಾಟಿಕೆ ನಡೆಸಿದ್ದ ಸಿಎಂ ಕುಮಾರಸ್ವಾಮಿ ಪರಿಸ್ಥಿತಿ ಈಗ ನಿಜಕ್ಕೂ ಹಾಗೇ ಆಗಿದೆ. ಮಂಡ್ಯಕ್ಕೆ ದರ್ಶನ್​, ಯಶ್​ ಪ್ರಚಾರಕ್ಕೆ ಹೋದರೆ ಸಾಕು, ಕುಮಾರಸ್ವಾಮಿಯವರಿಗೆ ನಿಖಿಲ್​ ಎಲ್ಲಿದ್ದಾರೆ ಎಂಬುದೇ ಮರೆತು ಹೋಗುತ್ತದೆ ಎಂದು ವ್ಯಂಗ್ಯವಾಡಿದರು.