ಬಿಜೆಪಿ ಅಧಿಕಾರಕ್ಕೆ ಬಂದರೆ ಶ್ರೀರಾಮುಲು ಮುಖ್ಯಮಂತ್ರಿ : ಹೊಸ ಬಾಂಬ್ ಸಿಡಿಸಿದ ವಿ.ಸೋಮಣ್ಣ

Featured, ಜಿಲ್ಲೆ

ಬಳ್ಳಾರಿ: ಒಂದು ವೇಳೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಶಾಸಕ ಶ್ರೀ ರಾಮುಲು ಮುಖ್ಯಮಂತ್ರಿ ಆಗುತ್ತಾರೆ ಎಂದು ಮಾಜಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಬಳ್ಳಾರಿ ಲೋಕಸಭಾ ಉಪಚುನಾವಣೆ ಪ್ರಚಾರದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಲಕ್ಷಣಗಳನ್ನು ರಾಜ್ಯದಲ್ಲಿ ಶ್ರೀರಾಮುಲು ಹೊಂದಿದ್ದಾರೆ. ಇತ್ತ ಕೇದಾರನಾಥ ಸ್ವಾಮೀಜಿ ಕೂಡ ಶ್ರೀರಾಮುಲು ಅವರಿಗೆ ಮುಖ್ಯಮಂತ್ರಿ ಆಗುವ ಲಕ್ಷಣಗಳಿವೆ. ಅವರಿಗೆ ಆಶೀರ್ವಾದ ಮಾಡಿ, ಬೆಳವಣಿಗೆಗೆ ಶ್ರಮಿಸಿ ಅಂತಾ ಸಲಹೆ ನೀಡಿದ್ದಾರೆ. ಹೀಗಾಗಿ ಅವರು ಖಂಡಿದ ಉಪಮುಖ್ಯಮಂತ್ರಿ ಅಲ್ಲಲ್ಲ, ಮುಖ್ಯಮಂತ್ರಿಯೇ ಆಗುತ್ತಾರೆ ಎಂದು ಹೇಳಿದ್ದಾರೆ.

ನಾನು ಸಾಕಷ್ಟು ಉಪಚುನಾವಣೆಗಳನ್ನು ಎದುರಿಸಿದ್ದೇನೆ. ಹತ್ತಾರು ಚುನಾವಣೆಗಳಲ್ಲಿ ಭಾಗಿಯಾಗಿದ್ದೇನೆ. ಒಬ್ಬ ಪ್ರತಿಷ್ಠಿತ ವ್ಯಕ್ತಿಯಾಗಿ, ಬಡತನದಿಂದ ಬಂದು ಇಡೀ ಜಿಲ್ಲೆಯಲ್ಲಿ ತನ್ನದೇಯಾದಂತಹ ಪ್ರಭಾವವನ್ನು ನಮ್ಮ ಪಕ್ಷದ ಮುಖಂಡ ಹಾಗೂ ಮಾಜಿ ಸಚಿವರಾಗಿರುವ ಶ್ರೀರಾಮುಲು ಅವರು ಬೆಳಸಿಕೊಂಡಿದ್ದು, ಯಾವುದೇ ಪಕ್ಷದವರು ಅವರ ನಡೆನುಡಿಯನ್ನು ಮುಕ್ತ ಕಂಠದಿಂದ ಹೊಗಳುವ ವ್ಯಕ್ತಿತ್ವವನ್ನು ಹೊಂದಿದ್ದಾರೆ ಎಂದು ಪ್ರಶಂಸಿಸಿದರು.

ಯಡಿಯೂರಪ್ಪ ನಂತರ ಶ್ರೀರಾಮುಲು ಅವರು ಈ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ. ರಾಷ್ಟ್ರಕ್ಕೆ ನರೇಂದ್ರ ಮೋದಿ ಅವರು ಹೇಗೋ ಹಾಗೇ ಬಳ್ಳಾರಿಗೆ ಶಾಸಕ ಶ್ರೀರಾಮುಲು ಎಂದು ಸೋಮಣ್ಣ ಶ್ಲಾಘಿಸಿದರು.