ಭೋಪಾಲ್: ‘ಮಧ್ಯಪ್ರದೇಶದಲ್ಲಿನ ಬಿಜೆಪಿಯ ದುರಾಡಳಿತ ಅಂತ್ಯಗೊಳಿಸಲು ಆಶೀರ್ವದಿಸಿ’ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷ ಕಮಲ್‌ನಾಥ್ ದೇವರ ಮೊರೆ ಹೋಗಿದ್ದಾರೆ.
ಶಿವನ ಮತ್ತೊಂದು ರೂಪವಾಗಿರುವ ಮಹಾಕಾಳೇಶ್ವರನಿಗೆ ಈ ಬಗ್ಗೆ ಕಮಲ್‌ನಾಥ್ ಬಹಿರಂಗ ಪತ್ರ ಬರೆದಿದ್ದಾರೆ.
’15 ವರ್ಷಗಳ ಬಿಜೆಪಿಯ ದುರಾಡಳಿತದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾಲಕಿಯರ ಮೇಲೆ ಅತ್ಯಾಚಾರಗಳು ನಡೆದಿವೆ. ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಯುವಕರು ನಿರುದ್ಯೋಗಿಗಳಾಗಿದ್ದಾರೆ’ ಎಂದು ಪತ್ರದಲ್ಲಿ ಬರೆದಿದ್ದಾರೆ.
‘ಬಿಜೆಪಿ ಸರ್ಕಾರ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ಬಿಜೆಪಿ ಮಾಡಿರುವ ತಪ್ಪುಗಳಿಗೆ ಪಾಠ ಕಲಿಸುವ ಕಾಲ ಈಗ ಬಂದೊದಗಿದೆ’ ಎಂದು ಹೇಳಿದ್ದಾರೆ.