ಬಿಜೆಪಿ ರಾಜ್ಯಾಧ್ಯಕ್ಷ ಒಬ್ಬ ಅವಿವೇಕಿ; ಇಂತಹ ಅವಿವೇಕಿಯನ್ನ ರಾಜ್ಯಾಧ್ಯಕ್ಷರನ್ನಾಗಿ  ಮಾಡಿರೋದು ದುರಾದೃಷ್ಟಕರ : ನಳಿನ್ ವಿರುದ್ದ ದಿನೇಶ್ ಗುಂಡೂರಾವ್ ವಾಗ್ದಾಳಿ – Vishwanews24

Featured, ರಾಜ್ಯ ನ್ಯೂಸ್

ಬಿಜೆಪಿ ರಾಜ್ಯಾಧ್ಯಕ್ಷ ಒಬ್ಬ ಅವಿವೇಕಿ; ಇಂತಹ ಅವಿವೇಕಿಯನ್ನ ರಾಜ್ಯಾಧ್ಯಕ್ಷರನ್ನಾಗಿ  ಮಾಡಿರೋದು ದುರಾದೃಷ್ಟಕರ : ನಳಿನ್ ವಿರುದ್ದ ದಿನೇಶ್ ಗುಂಡೂರಾವ್ ವಾಗ್ದಾಳಿ – Vishwanews24

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ರಾಹುಲ್ ಗಾಂಧಿ ಒಬ್ಬ ಡ್ರಗ್ ಪೆಡ್ಲರ್ ಎಂಬುದಾಗಿ ಹೇಳಿದಂತ ಮಾತಿಗೆ, ಕಾಂಗ್ರೆಸ್ ಮುಖಂಡರು ಸಿಡಿದೆದ್ದಿದ್ದಾರೆ.

ಈ ಕುರಿತಂತೆ ಮಾತನಾಡಿರುವಂತ ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಒಬ್ಬ ಅವಿವೇಕಿ. ಇಂತಹ ಅವಿವೇಕಿಯನ್ನೇ ರಾಜ್ಯಾಧ್ಯಕ್ಷರನ್ನಾಗಿ ಬಿಜೆಪಿ ಪಕ್ಷ ಮಾಡಿರೋದು ದುರಾದೃಷ್ಠಕರವಾಗಿದೆ. ನಳೀನ್ ಕುಮಾರ್ ಹೇಳಿರುವಂತ ಮಾತಿಗೂ ಕ್ಷಮೆ ಕೇಳೋದಕ್ಕೆ ಅರ್ಹತೆ ಇಲ್ಲದಂತವನಾಗಿದ್ದಾನೆ ಎಂದು ಕಿಡಿಕಾರಿದ್ದಾರೆ.

ಬಂಟ್ವಾಳ: ವಿಹಿಂಪ – ಬಜರಂಗ ದಳ ಕಟ್ಟೆಗೆ ಹಾನಿ – Vishwanews24

ನಳಿನ್ ಕುಮಾರ್ ಕಟೀಲ್, ಯತ್ನಾಳ್, ಸಿ.ಟಿ.ರವಿ, ಅನಂತ್ ಕುಮಾರ್ ಹೆಗ್ಡೆ ಅಂತವರೇ ಇವರಿಗೆ ಹೀರೋಗಳು. ಅವರು ಆಡುವ ಮಾತು ಎಂತದ್ದು ಬಳಸುವ ಭಾಷೆ ಎಂತದ್ದು…?, ಇಂತವರನ್ನ ಬೆಂಬಲಸುವವರೇ ನರೇಂದ್ರ ಮೋದಿ. ಕಟೀಲ್ ಗೆ ಕ್ಷಮೆ ಕೇಳುವ ಅರ್ಹತೆಯೂ ಇಲ್ಲ. ಕಟೀಲ್ ನ ಕೂಡಲೇ ವಜಾ ಮಾಡಬೇಕು. ಬಾಯಿ ಮುಚ್ಚಿಕೊಂಡು ಇರಪ್ಪ ಅಂತ ಹೇಳಬೇಕು. ನಳಿನ್ ಕುಮಾರ್ ಕಟೀಲ್ ಒಬ್ಬ ಅವಿವೇಕಿ. ಅವರಿಗೆ ತಲೆ ಕೆಟ್ಟಿದೆ ಎಂದರು. 

ಮಂಗಳೂರು: ಅತ್ಯಾಚಾರವೆಸಗಿ ಕೊಲೆ ಮಾಡುವವರಿಗೆ ಸಾರ್ವಜನಿಕವಾಗಿ ಗಲ್ಲಿಗೇರಿಸುವ ಕಾನೂನನ್ನು ಸರಕಾರ ಜಾರಿಗೊಳಿಸಲಿ : ಶಕುಂತಲಾ ಶೆಟ್ಟಿ – Vishwanews24