ಬಿಜೆಪಿ ವಿರುದ್ದ ಹನುಮ ಜಯಂತಿ ದಿನದಿಂದಲೇ ಹೋರಾಟ ಆರಂಭ : ಎಚ್.ಡಿ.ಕುಮಾರಸ್ವಾಮಿ – Vishwanews24

Featured, ರಾಜ್ಯ ನ್ಯೂಸ್

ಭಾವನಾತ್ಮಕ ವಿಚಾರ ಮುಂದಿಟ್ಟುಕೊಂಡು ಸಮಾಜದ ಸ್ವಾಸ್ಥ್ಯ ಕೆಡಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ..

ಬಿಜೆಪಿ ವಿರುದ್ದ ಪ್ರತಿಭಟಿಸಲು ಕಾಂಗ್ರೆಸ್ಸಿಗರಿಗೆ ಧ್ವನಿಯೇ ಇಲ್ಲದಂತಾಗಿದೆ..

ನಾವೇ ಇದರ ವಿರುದ್ಧ ನಿಲ್ಲುವುದು ಅಗತ್ಯ, ಅನ್ಯಾಯದ ವಿರುದ್ಧ ಧ್ವನಿ ಎತ್ತಿ ನ್ಯಾಯಪರವಾಗಿ ಇರುತ್ತೇವೆ..

ಬೆಂಗಳೂರು: ಬಿಜೆಪಿ ವಿರುದ್ದ ಹನುಮ ಜಯಂತಿ ದಿನದಿಂದಲೇ ಹೋರಾಟ ಆರಂಭಿಸುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಜೆಡಿಎಸ್ ಜನರಿಗೆ ಯಾಕೆ ಬೇಕು ಎಂಬುದನ್ನು 2023ಕ್ಕೆ ನಿರ್ಣಯಿಸಲಿದ್ದಾರೆ. ಬಿಜೆಪಿ ಆಡಳಿತದಿಂದಾಗಿ ರಾಜ್ಯಕ್ಕೆ ಹಲವು ಅನ್ಯಾಯವಾಗಿದ್ದು, ಇದಕ್ಕಾಗಿ ಮಿಷನ್ 123 ರೋಡ್ ಮ್ಯಾಪ್ ಮಾಡಿದ್ದೇವೆ. ರೈತರ ಹೊಲಕ್ಕೆ ನೀರು ನೀಡುವ ಭರವಸೆಯೊಂದಿಗೆ ಹೋರಾಟ ಪ್ರಾರಂಭಿಸಲಾಗುವುದು ಎಂದರು.

ಹಿಜಾಬ್, ಹಲಾಲ್ ವಿವಾದ ಎಬ್ಬಿಸಿ ಭಾವನಾತ್ಮಕ ವಿಚಾರ ಮುಂದಿಟ್ಟುಕೊಂಡು ಸಮಾಜದ ಸ್ವಾಸ್ಥ್ಯ ಕೆಡಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಪ್ರತಿಭಟಿಸಲು ಕಾಂಗ್ರೆಸ್ಸಿಗರಿಗೆ ಧ್ವನಿಯೇ ಇಲ್ಲದಂತಾಗಿದೆ. ಹೀಗಾಗಿ ನಾವೇ ಇದರ ವಿರುದ್ಧ ನಿಲ್ಲುವುದು ಅಗತ್ಯವಾಗಿದೆ. ಅನ್ಯಾಯದ ವಿರುದ್ಧ ಧ್ವನಿ ಎತ್ತಿ ನ್ಯಾಯಪರವಾಗಿ ಇರುತ್ತೇವೆ ಎಂದವರು ತಿಳಿಸಿದರು.

ಕಾಶ್ಮೀರಿ ಫೈಲ್‍ಗೆ ಶೇ.100ರಷ್ಟು ತೆರಿಗೆ ವಿನಾಯಿತಿ ನೀಡಿದಂತೆ ಸಚಿವರ ಕೊಠಡಿಯಲ್ಲಿರುವ ಕಡತಗಳಿಗೆ ಶೇ.100ರಷ್ಟು ರಿಯಾಯಿತಿ ಕೊಟ್ಟರೆ ರಾಜ್ಯದ ಭವಿಷ್ಯ ಚೆನ್ನಾಗಿರಲಿದೆ. ಇಂಧನ ಬೆಲೆ, ಸಿಮೆಂಟ್, ಕಬ್ಬಿಣ, ಅಡುಗೆ ಅನಿಲದ ಬೆಲೆ ಏರಿಕೆಯಿಂದಾಗಿ ಬಡವರ ಬದುಕು ಸಂಕಷ್ಟದೆಡೆಗೆ ಸಾಗಿದೆ. ಇದರ ವಿರುದ್ದ ಹೋರಾಡುವುದಕ್ಕೆ ವಿಶ್ವಹಿಂದು ಪರಿಷತ್ ಮುಂದಾಗಲಿ ಎಂದು ಇದೇ ವೇಳೆ ಅವರು ವಾಗ್ದಾಳಿ ನಡೆಸಿದರು.

ವಿಧಾನಪರಿಷತ್ ಸದಸ್ಯ ರಮೇಶ್ ಗೌಡ, ವಿಧಾನಪರಿಷತ್ ಮಾಜಿ ಸದಸ್ಯ ಟಿ.ಎ.ಶರವಣ, ಮಾಜಿ ಶಾಸಕ ವೆಂಕಟಶಿವಾರೆಡ್ಡಿ, ಮಾಜಿ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ, ಪಕ್ಷದ ಮುಖಂಡರಾದ ನಾರಾಯಣಸ್ವಾಮಿ ಉಪಸ್ಥಿತರಿದ್ದರು.

ರಾಜ್ಯದ ಜನತೆಗೆ ಬಿಗ್ ಶಾಕ್ ; ವಿದ್ಯುತ್ ದರ ಪ್ರತಿ ಯೂನಿಟ್ ಗೆ 35 ಪೈಸೆ  ಹೆಚ್ಚಳ ; ಏ.1ರಿಂದಲೇ ಜಾರಿಗೆ – Vishwanews24

Leave a Reply