ಬಿಜೆಪಿ ಸರ್ಕಾರ ಭಾರತ ಬೆಳಗುತ್ತಿದೆ ಎನ್ನುತ್ತಿದೆ ಆದ್ರೆ ಜನತೆ ಕತ್ತಲೆಯಲ್ಲಿದ್ದಾರೆ : ರಮೇಶ್ ಕಾಂಚನ್ -Vishwanews24

Featured, ಉಡುಪಿ

ಬಿಜೆಪಿ ಸರ್ಕಾರ ಭಾರತ ಬೆಳಗುತ್ತಿದೆ ಎನ್ನುತ್ತಿದೆ ಆದ್ರೆ ಜನತೆ ಕತ್ತಲೆಯಲ್ಲಿದ್ದಾರೆ : ರಮೇಶ್ ಕಾಂಚನ್ -Vishwanews24

ಉಡುಪಿ:  ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲಗಳ ಬೆಲೆ ಕಡಿಮೆ ಇದ್ದರೂ ದೇಶದಲ್ಲಿ ಅನಿಯಂತ್ರಿತವಾಗಿ ಏರಿಕೆಯಾಗುತ್ತಿರುವ ಪೆಟ್ರೋಲ್ ಡಿಸೇಲ್ ದರವನ್ನು ನಿಯಂತ್ರಿಸಲು ಆಗದೇ ಪರದಾಡುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರ, ಹೇಗೆ ಆಡಳಿತ ನಡೆಸುತ್ತಿದೆ ಎನ್ನುವುದಕ್ಕೆ ಇದೊಂದು ಸ್ಪಷ್ಟ ನಿದರ್ಶನವಾಗಿದೆ ಎಂದು ನಗರಸಭಾ ಸದಸ್ಯ, ಕಾಂಗ್ರೆಸ್ ಮುಖಂಡ ರಮೇಶ್ ಕಾಂಚನ್ ಟೀಕಿಸಿದ್ದಾರೆ.

ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಇದ್ಯಾಗ ಪೆಟ್ರೋಲ್, ಡಿಸೇಲ್ ಬೆಲೆ ಈ ರೀತಿ ಏರಿಕೆಯಾಗಿರಲಿಲ್ಲ.ಒಂದೊಮ್ಮೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರಿಕೆಯಾದರೂ ದೇಶದಲ್ಲಿ ಜನರಿಗೆ ಹೊರೆಯಾಗದ ರೀತಿಯಲ್ಲಿ ಸ್ವಲ್ಪ ಬೆಲೆ ಏರಿಕೆ ಮಾಡಲಾಗುತ್ತಿತ್ತು. ಆದ್ರೆ ಇದನ್ನೇ ನೆಪವಾಗಿಟ್ಟುಕೊಂಡು ಬಿಜೆಪಿ ಪಕ್ಷ ಬೀದಿಗಿಳಿದು ಪ್ರತಿಭಟನೆ ನಡೆಸಿತ್ತು.

ಇದೀಗ ದಿನಂಪ್ರತಿ ಬೆಲೆ ಏರಿಕೆಯಾಗುತ್ತಿದ್ದರೂ ಬಿಜೆಪಿ ಪಕ್ಷದ ನಾಯಕರೆಲ್ಲಾ ಕಣ್ಮರೆಯಾಗಿದ್ದಾರೆ. ಇದೀಗ ಯಾವುದೇ ಪ್ರತಿಭಟನೆಯ ಸುದ್ದಿ ಇಲ್ಲ..ಅಂದು ಪೆಟ್ರೋಲ್ , ಡಿಸೇಲ್ ಗಾಗಿ ಪ್ರತಿಭಟಿಸಿ ಪೌರುಷ ತೋರಿಸಿದವರು ಬಾಯಿಮುಚ್ಚಿಕೊಂಡಿದ್ದಾರೆ. ಕೇಂದ್ರದಲ್ಲಿ ಬೆಲೆ ಏರಿಕೆಯಾದರೆ ರಾಜ್ಯದಲ್ಲಿ ಬೆಲೆ ಏರಿಕೆಯ ಜೊತೆಗೆ ತೆರಿಗೆ ಹೆಚ್ಚಳ ಮೂಲಕ ಡಬಲ್ ಶಾಕ್ ಟ್ರಿಟೆಂಟ್ ಸರಕಾರ ನೀಡಿದೆ.ಒಟ್ಟಾರೆಯಾಗಿ ಬಿಜೆಪಿ ಸರ್ಕಾರ ಭಾರತ ಬೆಳಗುತ್ತಿದೆ ಎನ್ನುತ್ತಿದೆ ಆದ್ರೆ ಜನತೆ ಕತ್ತಲೆಯಲ್ಲಿದ್ದಾರೆ ಎಂದು ರಮೇಶ್ ಕಾಂಚನ್ ಟೀಕಿಸಿದ್ದಾರೆ.