ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಕೇವಲ 6 ತಿಂಗಳು ಮಾತ್ರ ಇರುತ್ತೆ : ಕಾಂಗ್ರೆಸ್ ಶಾಸಕ ಅಮರೇಗೌಡ -Vishwanews24
ಕೊಪ್ಪಳ : ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಕೇವಲ 6 ತಿಂಗಳು ಮಾತ್ರ ಇರುತ್ತೆ ಎಂದು ಕುಷ್ಟಗಿ ಕಾಂಗ್ರೆಸ್ ಶಾಸಕ ಅಮರೇಗೌಡ ಭವಿಷ್ಯ ನುಡಿದಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ಅಮರೇಗೌಡ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕೇವಲ 6 ತಿಂಗಳು ಮಾತ್ರ ಇರುತ್ತೆ. ಬಿಜೆಪಿಯವರು ಲೂಟಿ ಮಾಡಿ ಮನೆಗೆ ಹೋಗ್ತಾರೆ, ಅಥವಾ ಅವರೇ ಬಡಿದಾಡಿಕೊಂಡು ಮನೆಗೆ ಹೋಗ್ತಾರೆ ಎಂದು ಹೇಳಿದರು.
ಬೆಳಗಾವಿಯವರು ಈಗ ಆರಂಭ ಮಾಡಿದ್ದಾರೆ. ಅವರೇ ಕೊನೆ ಮಾಡುತ್ತಾರೆ ಇಂದು ಸಂಜೆ ಒಳಗೆ ಏನೆಲ್ಲಾ ಆಗುತ್ತೆ ಎನ್ನುವುದನ್ನು ನೋಡಿ ಎಂದು ಬಿಜೆಪಿ ಸರ್ಕಾರದ ಆಯುಷ್ಯದ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಇನ್ನು ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಬಂದು 25 ದಿನಗಳ ಬಳಿಕ ಸಂಪುಟ ವಿಸ್ತರಣೆ ಕುತೂಹಲಕ್ಕೆ ಇಂದು ತೆರೆ ಬಿದ್ದಿದ್ದು, ರಾಜಭವನದ ಗಾಜಿನಮನೆಯಲ್ಲಿ ಸಚಿವ ಸಂಪುಟದ ಹೊಸ 17 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
