ಬಿ.ಎಸ್. ಯಡಿಯೂರಪ್ಪ ರಿಂದ ‘ಕಮಲ ಜ್ಯೋತಿ’ ಅಭಿಯಾನಕ್ಕೆ ಚಾಲನೆ – Vishwanews24
ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಿದ್ದತೆ ಆರಂಭಿಸಿರುವ ಬಿಜೆಪಿ ರಾಜ್ಯದಲ್ಲಿ ಕಮಲಜ್ಯೋತಿ ಅಭಿಯಾನಕ್ಕೆ ಚಾಲನೆ ನೀಡಿತು. ನಗರದ ಡಾಲರ್ಸ್ ಕಾಲೋನಿಯಲ್ಲಿರುವ ಬಿಎಸ್ವೈ ನಿವಾಸ ಮುಂಭಾಗದಲ್ಲಿ ರಂಗೋಲಿಯಿಂದ ಬಿಡಿಸಿದ ಕಮಲ ಚಿತ್ರದಲ್ಲಿ ದೀಪ ಬೆಳಗಿಸೋ ಮೂಲಕ ಕಮಲಜ್ಯೋತಿ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಲಾಯಿತು..
ಬೆಂಗಳೂರಿನಲ್ಲಿ ಕೇಂದ್ರ ಸರಕಾರದ ಯೋಜನೆಗಳ ಫಲಾನುಗಳ ಮನೆಗಳಿಗೆ ಪಕ್ಷದ ಮುಖಂಡರೊಂದಿಗೆ ಭೇಟಿ ನೀಡಿ ದೀಪ ಹಚ್ಚಿದರು. ಪ್ರಧಾನಿ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರದ ಸಾಧನೆಗಳ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸುವ ಮೂಲಕ ಕಮಲ ದೀಪ ಹಚ್ಚೋಣ, ಮತ್ತೊಮ್ಮೆ ಮೋದಿ ಸರಕಾರ ಅಧಿಕಾರಕ್ಕೆ ತರುವ ಸಂಕಲ್ಪ ಮಾಡೋಣ ಎಂದು ಬಿಎಸ್ ವೈ ಇದೇ ವೇಳೆ ತಿಳಿಸಿದರು.
ಬಳಿಕ ಯಡಿಯೂರಪ್ಪ ಅವರು ಮನೆ ಮನೆಗೆ ತೆರಳಿ ದೀಪ ಹಚ್ಚಿದರು. ಈ ವೇಳೆ ಬಿಎಸ್ವೈ ಅವರನ್ನು ಮಹಿಳೆಯರು ಮತ್ತು ಮಕ್ಕಳು ಆರತಿ ಎತ್ತಿ ಸ್ವಾಗತಿಸಿದರು. ಮಕ್ಕಳು ಕಮಲ ನೀಡಿ ಸ್ವಾಗತಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿರುವ ಜನಪರ ಕಾರ್ಯಕರ್ಮಗಳ ಬಗ್ಗೆ ಜನರಿಗೆ ತಿಳಿಸಿಕೊಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ದೇಶದಲ್ಲಿ ಮತ್ತೊಮ್ಮೆ ಕಮಲ ಜ್ಯೋತಿ ಬೆಳಗಲಿದೆ ಎಂದು ಹೇಳಿದರು..
ಬೆಂಗಳೂರಿನ ರಾಧಾಕೃಷ್ಣ ದೇವಸ್ಥಾನ ಸಂಜಯ್ ನಗರ, ಹೆಬ್ಬಾಳ ಬಳಿ ಮಹಿಳಾ ಕಾರ್ಯಕರ್ತರಿಂದ ‘ಕಮಲ ಜ್ಯೋತಿ’ ರಂಗೋಲಿ ಚಿತ್ತಾರದಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಭಾಗಿಯಾದರು.
ಬೆಂಗಳೂರಿನಲ್ಲಿ ಕೇಂದ್ರ ಸರಕಾರದ ಯೋಜನೆಗಳ ಫಲಾನುಗಳ ಮನೆಗಳಿಗೆ ಪಕ್ಷದ ಮುಖಂಡರೊಂದಿಗೆ ಭೇಟಿ ನೀಡಿ ದೀಪ ಹಚ್ಚಿದೆ. ಪ್ರಧಾನಿ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರದ ಸಾಧನೆಗಳ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸುವ ಮೂಲಕ ಕಮಲ ದೀಪ ಹಚ್ಚೋಣ, ಮತ್ತೊಮ್ಮೆ ಮೋದಿ ಸರಕಾರ ಅಧಿಕಾರಕ್ಕೆ ತರುವ ಸಂಕಲ್ಪ ಮಾಡೋಣ ಎಂದು ತಿಳಿಸಿದೆ. #BJPKamalJyoti pic.twitter.com/2hPszAzwRs
— B.S. Yediyurappa (@BSYBJP) February 26, 2019
National General Secretary Sri. @PMuralidharRao and Former DCM Sri. @RAshokaBJP at #BJPKamalJoyti campaign in Bengaluru. pic.twitter.com/HMCTHZL1IJ
— BJP Karnataka (@BJP4Karnataka) February 26, 2019
