ಬಿ.ಸಿ ರೋಡ್ ಚಲೋ ಹಾಗೂ ಈದ್ ಮಿಲಾದ್ ಮೆರವಣಿಗೆ ಶಾಂತಿಯುತವಾಗಿ ನಡೆದಿದೆ : ದಕ ಎಸ್ಪಿ – vishwanews24
ಬಿ.ಸಿ ರೋಡ್ ಚಲೋ ಹಾಗೂ ಈದ್ ಮಿಲಾದ್ ಮೆರವಣಿಗೆ ಶಾಂತಿಯುತವಾಗಿ ನಡೆದಿದೆ : ದಕ ಎಸ್ಪಿ
ಮಂಗಳೂರು: ಪೊಲೀಸರ ಬಿಗಿ ಬಂದೋಬಸ್ತ್ನಲ್ಲಿ ಬಿ.ಸಿ ರೋಡ್ ಚಲೋ ಹಾಗೂ ಈದ್ ಮಿಲಾದ್ ಮೆರವಣಿಗೆ ಶಾಂತಿಯುತವಾಗಿ ನಡೆದಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಎಸ್ಪಿ ಗಿರೀಶ್.ಎನ್ ತಿಳಿಸಿದ್ದಾರೆ.
ಬಜರಂಗದಳ ಹಾಗೂ ವಿಹೆಚ್ಪಿಯಿಂದ ಬಿ.ಸಿ ರೋಡ್ ಚಲೋ ಕರೆ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ ರೋಡ್ನಲ್ಲಿ ಜಮಾಯಿಸಿದ್ದರು. ಬಜರಂಗದಳ ಹಾಗೂ ವಿಹೆಚ್ಪಿಯ ಕಾರ್ಯಕರ್ತರ ನಡುವೆ ತಳ್ಳಾಟ ನೂಕಾಟ ನಡೆದಿತ್ತು. ಕೊನೆಗೆ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
