ಬುಧದೋಷ ನಿವಾರಿಸಲು ಬುಧವಾರ ಗಣೇಶನನ್ನು ಪ್ರಾರ್ಥಿಸಿ -Vishwanews24
ಬುಧದೋಷ ನಿವಾರಿಸಲು ಬುಧವಾರ ಗಣೇಶನನ್ನು ಪ್ರಾರ್ಥಿಸಿ -Vishwanews24
ಎಲ್ಲಾ ಶುಭಕಾರ್ಯಗಳನ್ನು ಮಾಡುವ ಮೊದಲು ವಿಘ್ನೇಶ್ವರನನ್ನು ಮುಂದೆ ಯಾವುದೇ ಕಷ್ಟಗಳು ಬಾರದಿರಲಿ ಎಂದು ಬೇಡುತ್ತೇವೆ. ವಿದ್ಯೆ, ಬುದ್ಧಿ ಎಲ್ಲವನ್ನೂ ಕರುಣಿಸುವ ವರದಾತ ಗಣೇಶ. ಅದಲ್ಲೂ ಬುಧವಾರದ ದೇವರಾದ ಗಣೇಶನನ್ನು ಪ್ರಾರ್ಥಿಸಿದರೆ ನಿಮ್ಮ ಅದೃಷ್ಟವೇ ಬದಲಾಗುವುದು.
ಬುಧವಾರವನ್ನು ಪ್ರತಿನಿಧಿಸುವ ಗ್ರಹ ಬುಧ. ನಮ್ಮೆಲ್ಲಾ ದುಃಖವನ್ನು ದೂರ ಮಾಡಿ ಸಮೃದ್ಧಿಯನ್ನು ಕರುಣಿಸುವ ಗಣೇಶ ಬುಧವಾರದ ಆಡಳಿತ ದೇವರು. ಖಾಯಿಲೆ, ಬಡತನ ಅಥವಾ ಯಾವುದಾದರೂ ತೊಂದರೆಯಿಂದ ಮುಕ್ತರಾಗಲು ಭಕ್ತಿಯಿಂದ ಗಣೇಶನನ್ನು ಪೂಜಿಸಿದರೆ ಪ್ರಯೋಜನಕಾರಿ. ಹಾಗಾಗಿ ಬುಧವಾರದ ದಿನ ಈ ಪರಿಹಾರ ಕ್ರಮಗಳನ್ನು ಮಾಡಿದರೆ ನಿಮ್ಮ ಎಲ್ಲಾ ದುಃಖಗಳು ನಿವಾರಣೆಯಾಗುವುದು ಹಾಗೂ ಬುಧ ದೋಷ ದೂರವಾಗುವುದು.
ಪರಿಹಾರ ಕ್ರಮಗಳು
ಜೀವನದಲ್ಲಿ ಎದುರಾಗುವ ಅಡೆತಡೆಗಳು ಹಾಗೂ ಸವಾಲುಗಳನ್ನು ತೊಡೆದುಹಾಕಲು ಬುಧವಾರ ಗಣೇಶನಿಗೆ ಸಿಂಧೂರ ಅಥವಾ ಕುಂಕುಮವನ್ನು ಅರ್ಪಿಸಿ.
ಬುಧವಾರ ಗಣೇಶನ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವುದರಿಂದ ಜೀವನದಲ್ಲಿ ಸಮೃದ್ಧಿಯನ್ನು ಪಡೆಯಬಹುದು
ಗಣೇಶನಿಗೆ ಗರಿಕೆಯನ್ನು ಅರ್ಪಿಸುವುದರಿಂದ ಜೀವನದಲ್ಲಿ ಅದೃಷ್ಟವನ್ನು ಪಡೆಯಬಹುದು
ನಿಮ್ಮ ಹೃದಯದಲ್ಲಿ ಏನಾದರೂ ಆಸೆಗಳಿದ್ದಲ್ಲಿ, ಅದನ್ನು ಈಡೇರಿಸಲು ಬುಧವಾರ ಗಣೇಶ ದೇವಾಲಯಕ್ಕೆ ಭೇಟಿ ನೀಡಿ ಬೆಲ್ಲವನ್ನು ಅರ್ಪಿಸಿದರೆ ಖಂಡಿತವಾಗಿಯೂ ನಿಮ್ಮ ಆಸೆ ನೆರವೇರುವುದು
ವೃತ್ತಿಯಲ್ಲಿ ಹಾಗೂ ವ್ಯವಹಾರದಲ್ಲಿ ಉಂಟಾಗುವ ಅಡೆತಡೆಗಳನ್ನು ತೊಡೆದುಹಾಕಲು ಗಣೇಶ ರುದ್ರಾಕ್ಷವನ್ನು ಧರಿಸಿ, ಎಲ್ಲಾ ಸವಾಲುಗಳನ್ನು ತೊಡೆದುಹಾಕಲು ಇದು ಸಹಾಯಕ
ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಅಥವಾ ಉತ್ತಮ ಅಂಕವನ್ನು ಗಳಿಸಲು ಬುಧವಾರ ಗಣೇಶನಿಗೆ ಹೆಸರು ಬೇಳೆಯ ಲಡ್ಡು ಅರ್ಪಿಸಿ
ಜೀವನದಲ್ಲಿ ಯಶಸ್ಸನ್ನು ಪಡೆಯಲು ಬುಧವಾರ ಹಸುವಿಗೆ ಹಸಿರು ಮೇವನ್ನು ನೀಡಿ
ಕಚ್ಚಾ ಹಾಲು ಹಾಗೂ ಪವಿತ್ರ ನೀರಿನಿಂದ ಸ್ನಾನ ಮಾಡುವಾಗ ಗಂಗೆಯ ಹೆಸರನ್ನು ಪಠಿಸಿ
ಬ್ರಾಹ್ಮಣರಿಗೆ ವಸ್ತ್ರದೊಂದಿಗೆ ಸಿಹಿಯನ್ನೂ ದಾನ ಮಾಡಿದರೆ ತುಂಬಾ ಒಳ್ಳೆಯದು
ಅದೃಷ್ಟವನ್ನು ಪಡೆಯಬೇಕೆಂದಿದ್ದರೆ ಗಣೇಶನಿಗೆ ಏಳು ತೆಂಗಿನಕಾಯಿಯಿಂದ ಮಾಡಿದ ಹಾರವನ್ನು ಹಾಕಬೇಕು
ಪ್ರತಿದಿನ ತುಳಸಿಗೆ ನೀರನ್ನು ಹಾಕಿ, ಒಂದು ತುಳಸಿ ಎಲೆಯನ್ನು ತಿನ್ನಬೇಕು
ಸ್ನಾನ ಮಾಡಿದ ನಂತರ ತುಪ್ಪಕ್ಕೆ ಬೆಲ್ಲವನ್ನು ಸೇರಿಸಿ ಮಿಶ್ರಣ ಮಾಡಿ ಗಣೇಶನಿಗೆ ಅರ್ಪಿಸಬೇಕು
ಬುಧ ದೋಷ
ಒಂಭತ್ತು ನವಗ್ರಹಗಳಲ್ಲಿ ಒಂದಾದ ಬುಧಗ್ರಹವು ಚರ್ಮ, ಬುದ್ಧಿವಂತಿಕೆ ಹಾಗೂ ಸಂವಹನವನ್ನು ಪ್ರತಿನಿಧಿಸುತ್ತದೆ. ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಬುಧಗ್ರಹವನ್ನು ಶುಭವೆಂದು ಪರಿಗಣಿಸಿದರೂ ದೋಷಪೂರಿತ ಗ್ರಹಗಳ ಜೊತೆಯಲ್ಲಿರುವಾಗ ಇದು ಅಶುಭವಾಗಿ ಪರಿಣಮಿಸಬಹುದು.
ಬುಧ ಪರಿಹಾರ ಮಂತ್ರಗಳು
ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಮಂತ್ರಗಳು ಬಹಳ ಮಹತ್ವ ಪಡೆಯುತ್ತದೆ. ಆಯಾಯ ಗ್ರಹಗಳಿಗೆ ಸಂಬಂಧಿಸಿದ ದೇವತೆಯ ಶಕ್ತಿಯನ್ನು ಹೊಂದಿರುವ ಮಂತ್ರಗಳು ನಿರ್ದಿಷ್ಟ ಕಂಪನವನ್ನು ಸೃಷ್ಟಿಸುತ್ತದೆ ಹಾಗೂ ಪಠಿಸುವ ವ್ಯಕ್ತಿಯಲ್ಲಿ ಶಕ್ತಿಯನ್ನು ತುಂಬುತ್ತದೆ. ನಿಮ್ಮ ಜನ್ಮ ರಾಶಿಗೆ ಸಂಬಂಧಿಸಿದ ಗ್ರಹಗಳನ್ನು ಶಾಂತಗೊಳಿಸಲು ಮಂತ್ರವನ್ನು ಪಠಿಸುವುದು ಬಹಳ ಒಳ್ಳೆಯ ಮಾರ್ಗವಾಗಿದೆ. ಬುಧ ಗ್ರಹವನ್ನು ಶಾಂತಗೊಳಿಸಲು ಬುಧ ಬೀಜಮಂತ್ರವನ್ನು ಪಠಿಸಬೇಕು
ಓಂ ಬ್ರಾಂ ಬ್ರೀಂ ಭ್ರೂಂ ಸಃ ಬುಧಾಯ ನಮಃ
ಈ ಬೀಜ ಮಂತ್ರವನ್ನು 9000 ಬಾರಿ ಪಠಿಸಬೇಕು. ಈ ಮಂತ್ರವನ್ನು ದಿನಕ್ಕೆ ನಾಲ್ಕು ಬಾರಿ ಅಂದರೆ ಒಟ್ಟು 36000 ಬಾರಿ ಪಠಿಸಿದರೆ ತುಂಬಾ ಒಳ್ಳೆಯದು
ಬುಧ ಮಂತ್ರ:
ಓಂ ಭೂಂ ಬುಧಾಯ ನಮಃ
ಅಥವಾ
ಓಂ ಹ್ಯೀಂ ಶ್ರೀಂ ಬುಧಾಯೇ ನಮಃ
ಬುಧ ದೋಷ ಪರಿಹಾರಕ್ಕೆ ರುದ್ರಾಕ್ಷ
ರುದ್ರಾಕ್ಷವೆಂದರೆ ಶಿವನ ಕಣ್ಣೀರಿನ ಬಿಂದು. ಧಾರ್ಮಿಕ ವಿಧಿಗಾಗಿ ಬಹಳ ಪರಿಣಾಮಕಾರಿಯಾದುದು ರುದ್ರಾಕ್ಷ. ರುದ್ರಾಕ್ಷ ಧರಿಸುವುದರಿಂದ ಸಮೃದ್ಧಿ, ಶಾಂತಿ ಹಾಗೂ ಶಿವನ ಆಶೀರ್ವಾದ ಹಾಗೂ ಜೀವನದಲ್ಲಿ ಕಂಡುಬರುವ ಸವಾಲುಗಳು ನಿವಾರಣೆಯಾಗುತ್ತದೆ.
