ಆ.26ರಂದು ಬೆಂಗಳೂರಿಗೆ ಮೋದಿ ಆಗಮನ ಹಿನ್ನೆಲೆ – ಸಂಚಾರದಲ್ಲಿ ಬದಲಾವಣೆ ; ಪರ್ಯಾಯ ಮಾರ್ಗ ಬಳಕೆಗೆ ಪೊಲೀಸರ ಮನವಿ  – Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರಿಗೆ ಮೋದಿ ಆಗಮನ ಹಿನ್ನೆಲೆ – ಸಂಚಾರದಲ್ಲಿ ಬದಲಾವಣೆ ; ಪರ್ಯಾಯ ಮಾರ್ಗ ಬಳಕೆಗೆ ಪೊಲೀಸರ ಮನವಿ 

ಬೆಂಗಳೂರು: ಸಿಲಿಕಾನ್ ಸಿಟಿಗೆ ಪ್ರಧಾನಿ ನರೇಂದ್ರ ಮೋದಿ  ಅಗಮಿಸುತ್ತಿರುವ ಹಿನ್ನಲೆ ಸಂಚಾರದಲ್ಲಿ ಭಾರೀ ಬದಲಾವಣೆ ಮಾಡಲಾಗಿದೆ. ಸಂಚಾರಿ ಪೊಲೀಸರು ನಗರದ ಕೆಲ ರಸ್ತೆಗಳ ಸಂಚಾರ ಮಾರ್ಗ ಬದಲಾವಣೆ ಮಾಡಿದ್ದಾರೆ. ಈ ಮೂಲಕ ಸುಗಮ ಸಂಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.

ಆಗಸ್ಟ್ 26 ಬೆಳಗ್ಗೆ 4:30 ರಿಂದ ಬೆಳಗ್ಗೆ 9:30 ರ ವರೆಗೆ ಕೆಳಕಂಡ ರಸ್ತೆ ಮಾರ್ಗ ಬದಲಾವಣೆ ಮಾಡಲಾಗಿದೆ. ಸಾರ್ವಜನಿಕರು ಈ ರಸ್ತೆಗಳ ಬದಲಾಗಿ ಪರ್ಯಾಯ ಮಾರ್ಗ ಬಳಕೆಗೆ ಪೊಲೀಸರ ಮನವಿ ಮಾಡಿಕೊಳ್ಳಲಾಗಿದೆ. ಇನ್ನು ಭಾರೀ ಸರಕು ಸಾಗಾಣಿಕೆ ವಾಹನಗಳ ಸಂಚಾರ ನಿರ್ಬಂಧ ಮಾಡಲಾಗಿದೆ. ನಗರದೊಳಗೆ ಆಗಸ್ಟ್ 26ರ ಬೆಳಗ್ಗಿನ ಜಾವ 04.00 ಗಂಟೆಯಿಂದ ಬೆಳಗ್ಗೆ 11.00 ಗಂಟೆಯವರೆಗೆ ನಿಷೇಧ ಮಾಡಲಾಗಿದೆ.

ಆಗಸ್ಟ್ 30ರಂದು ಮೈಸೂರಿನಲ್ಲಿ ಗೃಹಲಕ್ಷ್ಮಿ ಯೋಜನೆಗೆ  ಅದ್ಧೂರಿ ಚಾಲನೆ : ಡಿಸಿಎಂ – Vishwanews24

ಪರ್ಯಾಯವಾಗಿ ವಾಹನ ಸವಾರರು ಬಳಸುವ ಮಾರ್ಗಗಳು: ಓಲ್ಡ್ ಏರ್ಪೋರ್ಟ್ ರಸ್ತೆ, ಓಲ್ಡ್ ಮದ್ರಾಸ್ ರಸ್ತೆ, ಎಂ.ಜಿ.ರಸ್ತೆ, ಕಬ್ಬನ್ ರಸ್ತೆ, ರಾಜಭವನ ರಸ್ತೆ, ಬಳ್ಳಾರಿ ರಸ್ತೆ (ಮೇಖ್ರಿ ಸರ್ಕಲ್), ಸಿವಿ ರಾಮನ್ ರಸ್ತೆ, ಯಶವಂತಪುರ ಫ್ಲೈ ಓವರ್, ತುಮಕೂರು ರಸ್ತೆ (ಯಶವಂತಪುರದಿಂದ ನಾಗಸಂದ್ರದವರೆಗೆ), ಮಾಗಡಿ ರಸ್ತೆ, ಹೊರವರ್ತುಲ ರಸ್ತೆ (ಗೊರಗುಂಟೆ ಪಾಳ್ಯ ಜಂಕ್ಷನ್‍ನಿಂದ ಸುಮನಹಳ್ಳಿ)ಗುಬ್ಬಿ ತೋಟದಪ್ಪ ರಸ್ತೆ, ಜಾಲಹಳ್ಳಿ ಕ್ರಾಸ್ ರಸ್ತೆ.

Leave a Reply