ಬೆಂಗಳೂರಿನಲ್ಲಿ ಹೊಸವರ್ಷಾಚರಣೆ ವೇಳೆ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದರೆ ಕ್ರಿಮಿನಲ್ ಕೇಸ್ -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು : ಹೊಸವರ್ಷಾಚರಣೆ ವೇಳೆ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಪೊಲೀಸ್ ಇಲಾಖೆ ಸಜ್ಜಾಗಿದೆ. ನ್ಯೂ ಇಯರ್ ವೇಳೆ ಕುಡಿದು ವಾಹನ ಚಾಲನೆ ಮಾಡಿದರೆ ಅಂತಹವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಬೆಂಗಳೂರು ಸಂಚಾರ ವಿಭಾಗ ಜಂಟಿ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ರವಿಕಾಂತೇಗೌಡ ಅವರು, ಹೊಸ ವರ್ಷಾಚರಣೆಗೆ ಕೆಲವೇ ದಿನಗಳು ಬಾಕಿ ಇದ್ದು, ಡಿ. 31ರಂದು ರಾತ್ರಿ ಯಾರಾದರೂ ಮದ್ಯ ಕುಡಿದು ವಾಹನ ಚಲಾಯಿಸಿದರೆ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾವುದು, ಈ ಬಗ್ಗೆ ಸಂಚಾರಿ ಪೊಲೀಸರು ತೀರ್ಮಾನಿಸಿದ್ದಾರೆ. ಹೀಗಾಗಿ ಅಂದು ಕುಡಿದು ವಾಹನ ಚಲಾಯಿಸಬೇಡಿ. ಚಲಾಯಿಸಿ ಸಿಕ್ಕಿಬಿದ್ದರೆ ನಿರ್ಲಕ್ಷ್ಯ ಆರೋಪದಡಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು. ಹೊಸ ವರ್ಷಾಚರಣೆಗೆ ಈ ಬಾರಿ 175 ಸ್ಥಳಗಳಲ್ಲಿ ಮದ್ಯ ತಪಾಸಣೆ ನಡೆಸಲಾಗುವುದು. ಕುಡಿದು ಹೆಣ್ಣು ಮಕ್ಕಳ ಮೇಲೆ ಬೀಳುವುದನ್ನೆಲ್ಲಾ ಸಹಿಸುವುದಿಲ್ಲ. ಅಂತಹವರನ್ನು ಕೂಡಲೇ ವಶಕ್ಕೆ ಪಡೆಯುವುದಾಗಿ ಸ್ಪಷ್ಟಪಡಿಸಿದ್ದಾರೆ…