ಬೆಂಗಳೂರು: ಬಿಎಂಟಿಸಿ ಬಸ್​ ಹರಿದು 15 ವರ್ಷದ ಬಾಲಕಿ ಸಾವು ; ಅಮ್ಮ-ಮಗನ ಸ್ಥಿತಿ ಗಂಭೀರ – Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು: ಬಿಎಂಟಿಸಿ ಬಸ್​ ಹರಿದು 15 ವರ್ಷದ ಬಾಲಕಿ ಸಾವು ; ಅಮ್ಮ-ಮಗನ ಸ್ಥಿತಿ ಗಂಭೀರ

ಬೆಂಗಳೂರು: ಬಿಎಂಟಿಸಿ ಬಸ್​ ಹರಿದು 15 ವರ್ಷದ ಬಾಲಕಿ ಮೃತಪಟ್ಟ ಘಟನೆ ಇಂದು ಬೆಳಗ್ಗೆ ಕೆ.ಆರ್.ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.

ಲಾವ್ಯಾಶ್ರೀ(15) ಮೃತ ದುರ್ದೈವಿ. ಪ್ರಿಯದರ್ಶಿನಿ ಎಂಬುವವರು ಮಗಳು ಲಾವ್ಯಾಶ್ರೀ ಮತ್ತು ಮಗ ಯಾಶ್ವಿನ್​ರನ್ನು ದ್ವಿಚಕ್ರ ವಾಹನದಲ್ಲಿ ಶಾಲೆಗೆ ಕರೆದೊಯ್ಯುತ್ತಿದ್ದರು.

ಟಿಸಿ ಪಾಳ್ಯಯಿಂದ ಭಟ್ಟರಹಳ್ಳಿ ಹೋಗುವ ಮಾರ್ಗದಲ್ಲಿ ಭಟ್ಟರಹಳ್ಳಿ ಸಿಗ್ನಲ್ ಬಳಿ ದ್ವಿಚಕ್ರ ವಾಹನ ಸ್ಕಿಡ್​ ಆಗಿದ್ದು, ಎಡಗಡೆಗೆ ತಾಯಿ-ಮಗ ಬಿದ್ದಿದ್ದಾರೆ. ಬಲಗಡೆಗೆ ಬಿದ್ದ ಬಾಲಕಿ ಮೇಲೆ ಹಿಂದೆ ಬಂದ ಬಸ್ ಹರಿದಿದೆ. ಕೂಡಲೆ ಆಸ್ಪತ್ರೆ ಸೇರಿಸಿದ್ರು ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಸಾವು.

📛 ಬಾಂಬ್ ಬ್ಲಾಸ್ಟ್ ಪ್ರಕರಣ : ನಾಳೆ ಗೃಹ ಸಚಿವ ಆರಗ ಜ್ಞಾನೇಂದ್ರ ಮಂಗಳೂರಿಗೆ – Vishwanews24

ಬಾಲಕನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಿಯದರ್ಶಿನಿ ಅವರೂ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ

Leave a Reply