ಬೆಂಗಳೂರು ಮಳೆಯಿಂದ ಮುಳುಗಲು ಪ್ರಕೃತಿ ಕಾರಣವೇ ಹೊರತು ಸರ್ಕಾರ ಅಲ್ಲ : ಬಿಸಿ ಪಾಟೀಲ್ – Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು ಮಳೆಯಿಂದ ಮುಳುಗಲು ಪ್ರಕೃತಿ ಕಾರಣವೇ ಹೊರತು ಸರ್ಕಾರ ಅಲ್ಲ : ಬಿಸಿ ಪಾಟೀಲ್ 

ದಾವಣಗೆರೆ: ಬೆಂಗಳೂರು ಮಳೆಯಿಂದ ಮುಳುಗಲು ಪ್ರಕೃತಿ ಕಾರಣವೇ ಹೊರತು ಸರ್ಕಾರ ಅಲ್ಲ ಎಂದು ಕೃಷಿ ಸಚಿವ ಬಿಸಿ ಪಾಟೀಲ್ ಹೇಳಿದರು.

ದಾವಣಗೆರೆಯಲ್ಲಿ ಮಾತನಾಡಿದ ಅವರು ಬೇರೆ ಪಕ್ಷಗಳ ವಿರುದ್ಧ ಇದರ ಬಗ್ಗೆ ದೂಷಣೆ ಮಾಡುವಂತಹದ್ದಲ್ಲ, ಬೇರೆ ಸರ್ಕಾರಗಳಿದ್ದಾಗ ಸರಿಯಾದ ಕಾಲುವೆ  ವ್ಯವಸ್ಥೆ ಮಾಡದೇ ಇರುವುದರಿಂದ ಈ ಸಮಸ್ಯೆ ಆಗಿದೆ.

ಟೌನ್ ಪ್ಲಾನ್ ಹಾಗೂ ಲೇಔಟ್ ಪ್ಲಾನ್​ ಗಳ ಅಪ್ರೂವ್ ಮಾಡುವ ವೇಳೆ ಬೇಕಾಬಿಟ್ಟಿ ಮಾಡಿದ್ದರಿಂದ ಶೇಖರಣೆಯಾಗಿರುವ ನೀರು ಹೊರ ಹೋಗಲು ಸಾಧ್ಯವಾಗಿಲ್ಲ. ಇಡಿ ರಸ್ತೆಗಳು ಕಾಂಕ್ರೀಟ್ ಮಯವಾಗಿದ್ದರಿಂದ ನೀರು ಕೂಡ ಹೀರಿಕೊಳ್ಳುವುದಿಲ್ಲ. ಅಕಾಲಿಕ ಮಳೆಯಾಗಿದ್ದರಿಂದ ಯಾರನ್ನು ದೂಷಿಸುವುದು ಸರಿ ಅಲ್ಲ ಇದಕ್ಕೆ ಎಲ್ಲರೂ ಹೊಣೆಯಾಗ ಬೇಕಾಗುತ್ತದೆ. ಇದಕ್ಕೆ ಸೂಕ್ತವಾದ ಪರಿಹಾರ ಕಲ್ಪಿಸುವ ಕೆಲಸ ಮಾಡುತ್ತೇವೆ ಎಂದರು.

ದ್ವೇಷದ ರಾಜಕಾರಣದಿಂದ ತಂದೆಯನ್ನು ಕಳೆದುಕೊಂಡಿದ್ದೇನೆ..ಆದರೆ ನನ್ನ ಪ್ರೀತಿಯ ದೇಶವನ್ನು ಕಳೆದುಕೊಳ್ಳುವುದಿಲ್ಲ : ರಾಹುಲ್ ಗಾಂಧಿ – Vishwanews24

Leave a Reply