ಬೆಂಗಳೂರು: ಮಹಿಳೆ ಮೇಲೆ ಹಲ್ಲೆ ಆರೋಪ, ಜೊಮ್ಯಾಟೋ ಡೆಲಿವರಿ ಬಾಯ್ ಬಂಧನ -Vishwanews24
ಬೆಂಗಳೂರು: ಮಹಿಳೆ ಮೇಲೆ ಹಲ್ಲೆ ಆರೋಪ, ಜೊಮ್ಯಾಟೋ ಡೆಲಿವರಿ ಬಾಯ್ ಬಂಧನ -Vishwanews24
ಬೆಂಗಳೂರು: ಡೆಲಿವರಿ ತಡವಾಗಿದ್ದನ್ನು ಪ್ರಶ್ನಿಸಿದ ಮಹಿಳೆಯ ಮೂಗಿಗೆ ಪಂಚ್ ಮಾಡಿದ್ದ ಜೊಮ್ಯಾಟೋ ಬಾಯ್ ನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ
ಡೆಲಿವರಿ ತಡವಾಗಿದ್ದಕ್ಕೆ ಮಹಿಳೆ ಮತ್ತು ಜೊಮ್ಯಾಟೋ ಬಾಯ್ ನಡುವೆ ವಾಗ್ವಾದ ನಡೆದು ಆತ ಮಹಿಳೆಯ ಮೂಗಿಗೆ ಪಂಚ್ ಮಾಡಿದ್ದರು. ಈ ಸಂಬಂಧ ಡೆಲಿವರಿ ಬಾಯ್ ಕಾಮರಾಜ್ ನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ಸ್ಟಾಗ್ರಾಮ್ ಬ್ಯೂಟಿ ಇನ್ಫ್ಲುಯೆನ್ಸರ್ ಆಗಿರುವ ಮಹಿಳೆ ಹಿತೇಶಾ ಚಂದ್ರಾಣಿ ತನಗಾದ ಹಲ್ಲೆಯ ವಿಡಿಯೋ ಮಾಡಿ ಘಟನೆಯನ್ನು ವಿವರಿಸಿದ್ದಾರೆ.
ಮಂಗಳೂರು : ನಿವೃತ್ತ ಪೊಲೀಸ್ ಅಧಿಕಾರಿ ಖಾತೆಯಿಂದ 6 ಲಕ್ಷ ಲಪಟಾಯಿಸಿದ ಖದೀಮರು -Vishwanews24
Karnataka: A delivery man of Zomato (in photo) has been booked and arrested for allegedly attacking a woman in Bengaluru, according to Bengaluru DCP (South East) Joshi Srinath
Zomato says, "We deeply regret this incident & apologise to Hitesha for this traumatic experience". pic.twitter.com/L3T4RUDvx2
— ANI (@ANI) March 11, 2021
ತಾನು ಜೊಮ್ಯಾಟೋದಲ್ಲಿ ಆರ್ಡರ್ ಮಾಡಿದ್ದ ಆಹಾರದ ಡೆಲಿವರಿ ತಡವಾಗಿದ್ದಕ್ಕೆ ಜೊಮ್ಯಾಟೋ ಡೆಲಿವರಿ ಬಾಯ್ ನ್ನು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೇ ತಡವಾಗಿದ್ದಕ್ಕಾಗಿ ಕಾರಣ ತಿಳಿಯಲು ಜೊಮ್ಯಾಟೋ ಕಾರ್ಯನಿರ್ವಾಹಕರೊಂದಿಗೆ ಮಾತನಾಡುತ್ತಿದ್ದಾಗ ಡೆಲಿವರಿ ಬಂದಿದ್ದರಿಂದ ಆತನಿಗೆ ಕಾಯುವುದಕ್ಕೆ ಅಥವಾ ಆರ್ಡರ್ ನ್ನು ವಾಪಸ್ ತೆಗೆದುಕೊಂಡು ಹೋಗುವುದಕ್ಕೆ ಸೂಚಿಸಿದ್ದಾರೆ. ಆದರೆ ಆರ್ಡರ್ ನ್ನು ವಾಪಸ್ ತೆಗೆದುಕೊಂಡು ಹೋಗಲು ಡೆಲಿವರಿ ಬಾಯ್ ನಿರಾಕರಿಸಿ, ನಾನೇನು ನಿಮ್ಮ ಗುಲಾಮನೇ ಎಂದು ಪ್ರಶ್ನಿಸಿದ್ದಾನೆ. ಏರು ಧ್ವನಿಯಲ್ಲಿ ಆತ ಮಾತನಾಡಿದ್ದರಿಂದ ಬಾಗಿಲು ಹಾಕಲು ಯತ್ನಿಸಿದಾಗ ಒಳ ನುಗ್ಗಿ ಟೇಬಲ್ ಮೇಲಿದ್ದ ಆರ್ಡರ್ ನ್ನು ಕಸಿದುಕೊಂಡು ಮೂಗಿಗೆ ಪಂಚ್ ಮಾಡಿ ಹಲ್ಲೆ ಮಾಡಿದ್ದಾನೆ ಎಂದು ಮಹಿಳೆ ವಿಡಿಯೋದಲ್ಲಿ ಆರೋಪಿಸಿದ್ದಾರೆ.
ಸುರೇಶ್ ಅಂಗಡಿ ತಾಯಿ ವಿಧಿವಶ -Vishwanews24
ತನ್ನ ಮೂಗು ಮುರಿದಿದ್ದು, ವೈದ್ಯರು ಶಸ್ತ್ರಚಿಕಿತ್ಸೆಗೊಳಪಡಬೇಕೆಂದು ಹೇಳುತ್ತಿದ್ದಾರೆ ಎಂದು ಮಹಿಳೆ ತಿಳಿಸಿದ್ದಾರೆ. ಜೊಮ್ಯಾಟೋ ಈ ಮಹಿಳೆಯ ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದು ಪೊಲೀಸ್ ತನಿಖೆ ಹಾಗೂ ವೈದ್ಯಕೀಯ ನೆರವು ನೀಡುವ ಭರವಸೆ ನೀಡಿದೆ.
