ಬೆಳಗಾವಿ : ರಥೋತ್ಸವ ವೇಳೆ ಪಟಾಕಿ ಸಿಡಿದು ರಥಕ್ಕೆ ಬೆಂಕಿ, ತಪ್ಪಿದ ಅನಾಹುತ – Vishwanews24
ಬೆಳಗಾವಿ : ರಥೋತ್ಸವ ವೇಳೆ ಪಟಾಕಿ ಸಿಡಿದು ರಥಕ್ಕೆ ಬೆಂಕಿ, ತಪ್ಪಿದ ಅನಾಹುತ – Vishwanews24
ಬೆಳಗಾವಿ: ಜಿಲ್ಲೆಯ ರಾಮದುರ್ಗ ತಾಲೂಕಿನ ಶಿವಪೇಟೆ ಗ್ರಾಮದಲ್ಲಿ ಜಡಿಶಂಕರಲಿಂಗ ದೇವರ ಜಾತ್ರೆಯನ್ನು ನಿನ್ನೆ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲೇ ಪಟಾಕಿ ಕೂಡ ಹಚ್ಚಿ ಸಂಭ್ರಮಿಸೋ ಸಂದರ್ಭದಲ್ಲಿ, ಪಟಾಕಿ ಕಿಡಿ ರಥೋತ್ಸವದ ಸಂದರ್ಭದಲ್ಲಿ ರಥಕ್ಕೆ ತಗುಲಿ, ಬೆಂಕಿ ಹೊತ್ತಿಕೊಂಡಿದೆ.
ಕೂಡಲೇ ಗಮನಿಸಿದಂತ ಜನರು ಬೆಂಕಿ ನಂದಿಸಿ, ಮುಂದಾಗಲಿದ್ದಂತ ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ.
ಉಡುಪಿ : ಅಮಾಯಕರನ್ನು ಹೊಡೆದು ಸಿಂಗಂ ಆಗಬೇಡಿ : ಪೊಲೀಸರಿಗೆ ಹಾಲಾಡಿ ಶ್ರೀನಿವಾಸ ಶೆಟ್ಟಿ – Vishwanews24
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಶಿವಪೇಟೆ ಗ್ರಾಮದಲ್ಲಿ ಜಡಿಶಂಕರಲಿಂಗ ದೇವರ 38ನೇ ಮಹಾರಥೋತ್ಸವವನ್ನು ನಿನ್ನೆ ಹಮ್ಮಿಕೊಳ್ಳಲಾಗಿತ್ತು. ಈ ಜಾತ್ರೆಯ ಸಂದರ್ಭದಲ್ಲಿ ಕೆಲ ಭಕ್ತರು ಪಟಾಕಿಯನ್ನು ಹಚ್ಚಿ ಸಿಡಿಸಿದ್ದಾರೆ. ಇದರಿಂದ ಹೊರ ಬಂದಂತ ಕಿಡಿಯೊಂದು ರಥದ ತುದಿಗೆ ತಗುಲಿದ ಕಾರಣ, ಬೆಂಕಿ ಹೊತ್ತಿಕೊಂಡಿದೆ.
ರಥದ ಮೇಲ್ಭಾಗಕ್ಕೆ ಬೆಂಕಿ ಹೊತ್ತಿಕೊಂಡಿದ್ದನ್ನು ಗಮನಿಸಿದಂತ ಜನರು, ಕೂಡಲೇ ರಥಕ್ಕೆ ತಗುಲಿದ್ದಂತ ಬೆಂಕಿಯನ್ನು ನಂದಿಸಿದ್ದಾರೆ. ಇದರಿಂದಾಗಿ ರಥ ಸಂಪೂರ್ಣವಾಗಿ ಸುಟ್ಟು, ಮುರಿದು ಬಂದಿದ್ದು ಮುಂದಾಗಲಿದ್ದಂತ ಭಾರೀ ಅನಾಹುತವೊಂದು ತಪ್ಪಿದಂತೆ ಆಗಿದೆ.
ಎಡಿಜಿಪಿ ಭಾಸ್ಕರ್ ರಾವ್ ಸ್ವಯಂ ನಿವೃತ್ತಿ ಮನವಿಗೆ ಸರ್ಕಾರ ಒಪ್ಪಿಗೆ.. Vishwanews24
