ಬೆಳ್ತಂಗಡಿ : ಚಿಕಿತ್ಸೆ ನೀಡುವ ನೆಪದಲ್ಲಿ ಮಹಿಳಾ ರೋಗಿಯೊಂದಿಗೆ ಸರ್ಕಾರಿ ಆಸ್ಪತ್ರೆ ದಂತ ವೈದ್ಯನಿಂದ ಅಸಭ್ಯ ವರ್ತನೆ -Vishwanews24
ಬೆಳ್ತಂಗಡಿ: ವೈದ್ಯರೋರ್ವರು ರೋಗಿ ಜತೆ ಅಸಭ್ಯವಾಗಿ ವರ್ತನೆ ಮಾಡಿದ ಘಟನೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಜ.29 ರ ಬುಧವಾರ ನಡೆದಿದೆ.
ಬೆಳ್ತಂಗಡಿ ಸರಕಾರಿ ಆಸ್ಪತ್ರೆ ದಂತ ವೈದ್ಯ ಸುಧಾಕರ ಆರೋಪಿ. ಹಲ್ಲು ನೋವಿಗೆ ಸಂಬಂಧಿಸಿ ಚಿಕಿತ್ಸೆಗೆಂದು ಬಂದ ಯುವತಿ ಜತೆ ಅಸಭ್ಯವಾಗಿ ವರ್ತಿಸಿರುವ ಕುರಿತು, ಯುವತಿ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.ಮೂಲತಃ ನೆಲ್ಯಾಡಿಯವರಾಗಿರುವ. ಡಾ. ಸುಧಾಕರ್ ಅವರು ವಿಟ್ಲ ಮತ್ತು ಬೆಳ್ತಂಗಡಿ ಆಸ್ಪತ್ರೆಯಲ್ಲಿ ಪ್ರಭಾರ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ದೂರು ದಾಖಲಿಸಿದ ಪೊಲೀಸರು ವೈದ್ಯನನ್ನು ಬಂಧಿಸಿ ವಿಚಾಣೆಗೆ ಒಳಪಡಿಸಿದ್ದಾರೆ. ಡಾ. ಸುಧಾಕರ್ ಮೇಲೆ ಹಿಂದೆ ಇದೇ ರೀತಿ ಆರೋಪಗಳು ಕೇಳಿ ಬಂದಿದ್ದವು.
