ಬೆಳ್ತಂಗಡಿ ತಾಲೂಕಿನ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಅವ್ಯವಹಾರ ಬಯಲು ಮಾಡಿ : ವಿಧಾನಸಭೆಯಲ್ಲಿ ಶಾಸಕ ಹರೀಶ್ ಪೂಂಜ -Vishwanews24

Featured, ದಕ್ಷಿಣ ಕನ್ನಡ

ಬೆಳ್ತಂಗಡಿ ತಾಲೂಕಿನ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಅವ್ಯವಹಾರ ಬಯಲು ಮಾಡಿ : ವಿಧಾನಸಭೆಯಲ್ಲಿ  ಹರೀಶ್ ಶಾಸಕ ಪೂಂಜ

ತಕ್ಷಣ ಆಡಳಿತಾಧಿಕಾರಿಯನ್ನು ಅಮಾನತು ಮಾಡಬೇಕು ಹಾಗೂ ಇಡೀ ಪ್ರಕರಣವನ್ನು ಕಮಿಷನರೇಟ್ ಮೂಲಕ ತನಿಖೆ ನಡೆಸಬೇಕೆಂದು ಶಾಸಕ ಪೂಂಜ ಆಗ್ರಹ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕೊಕ್ಕಡ ಸಮೀಪದ ಪ್ರಖ್ಯಾತ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಹರಕೆ ಗಂಟೆಗಳ ಮಾರಾಟದಲ್ಲಿ 1 ಕೋಟಿ ರೂ.ಗಳಿಗೂ ಅಧಿಕ ಅವ್ಯವಹಾರ ನಡೆದಿದೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರಾಜ್ಯ ವಿಧಾನ ಮಂಡಲದ ಅಧಿವೇಶನದಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ಅಧಿವೇಶನದಲ್ಲಿ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ನೀಡಿದ ಉತ್ತರಕ್ಕೂ, ತಮಗೆ ಸಿಕ್ಕಿದ ಪಟ್ಟಿಯ ದಿನಾಂಕದಲ್ಲೂ ವ್ಯತ್ಯಾಸ ಇದೆ ಅಂತ ಶಾಸಕರು ಗುಡುಗಿದರು.ಅಲ್ಲದೆ ಹರಾಜು ಪಟ್ಟಿಯಲ್ಲಿ ಸಂಪೂರ್ಣ ಬದಲಾವಣೆಗಳು ಇದೆ ಅಂತ ಹೇಳಿ ಸಭಾಧ್ಯಕ್ಷರ ಗಮನಕ್ಕೆ ತಂದರು.

ಕರಾವಳಿಯ ಶಾಸಕ ಹರೀಶ್ ಪೂಂಜಾ, ಸದ್ರಿ ಪ್ರಕರಣದಲ್ಲಿ ದೇವಳದ ಆಡಳಿತಾಧಿಕಾರಿ ಮತ್ತು ಆಡಳಿತ ಮಂಡಳಿಯವರು ಸೇರಿಕೊಂಡು ಭಾರಿ ದೊಡ್ಡ ಮಟ್ಟದ ಅವ್ಯವಹಾರ ನಡೆಸಿದ್ದಾರೆ ಅಂತ ಆರೋಪಿಸಿದರು.ಮಾತ್ರವಲ್ಲದೆ ತಕ್ಷಣ ಆಡಳಿತಾಧಿಕಾರಿಯನ್ನು ಅಮಾನತು ಮಾಡಬೇಕು ಹಾಗೂ ಇಡೀ ಪ್ರಕರಣವನ್ನು ಕಮಿಷನರೇಟ್ ಮೂಲಕ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕಂದಾಯ ಸಚಿವ ಆರ್ ಅಶೋಕ್, ಯಾರೇ ತಪ್ಪು ಮಾಡಿದ್ರು ಅದು ತಪ್ಪೇ, ಆದ್ದರಿಂದ ಆಡಳಿತ ಮಂಡಳಿಗೆ ಸೂಕ್ತ ನೋಟೀಸ್ ಕೊಟ್ಟು ವರದಿ ಪಡೆದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು…

ಬೆಳ್ತಂಗಡಿಯ ಸಮಸ್ಯೆಗಳನ್ನು ಪ್ರತೀ ಬಾರಿ ವಿಧಾನ ಸಭೆಯಲ್ಲಿ ಚರ್ಚಿಸುವ ಮೂಲಕ ಶಾಸಕ ಹರೀಶ್ ಪೂಂಜಾ ಜನರ ಸಮಸ್ಯೆಗಳಿಗೆ ಸ್ಪಂದಿಸುವುದರಲ್ಲಿ ಒಂದು ಹೆಜ್ಜೆ ಮುಂದೆ ಇರ್ತಾರೆ ಅನ್ನೋದಕ್ಕೆ ಈ ನಿದರ್ಶನವೇ ಸಾಕ್ಷಿಯಾಗಿದೆ.