ಬೆಳ್ತಂಗಡಿ: ಪ್ರವೀಣ್ ನೆಟ್ಟಾರು ಕೊಲೆ ಕೇಸ್: ಆರೋಪಿ ನೌಷದ್ ಮನೆ ಮೇಲೆ ಎನ್‌ಐಎ ದಾಳಿ – vishwanews24

Featured, ದಕ್ಷಿಣ ಕನ್ನಡ

ಬೆಳ್ತಂಗಡಿ: ಪ್ರವೀಣ್ ನೆಟ್ಟಾರು ಕೊಲೆ ಕೇಸ್: ನಾಪತ್ತೆಯಾಗಿರುವ ಆರೋಪಿ ನೌಷದ್ ಮನೆ ಮೇಲೆ ಎನ್‌ಐಎ ದಾಳಿ

ಬೆಳ್ತಂಗಡಿ: ಬೆಳ್ಳಾರೆ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿರುವ ಆರೋಪಿ ನೌಷದ್ ಮನೆ ಮೇಲೆ ಎನ್‌ಐಎ ತಂಡ ಇಂದು ಮುಂಜಾನೆ ದಾಳಿ ನಡೆಸಿದೆ.

ಬೆಂಗಳೂರಿನಿಂದ ಆಗಮಿಸಿದ 5 ಜನರ ಎನ್‌ಐಎ ತಂಡ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಪೊಯ್ಯೆಗುಡ್ಡೆ ನಿವಾಸಿ ನೌಷದ್ (27) ಮನೆಗೆ ಇಂದು ಮುಂಜಾನೆ 5.30 ರ ಸುಮಾರಿಗೆ ದಾಳಿ ಮಾಡಿದ್ದು, ಪರಿಶೀಲನೆ ನಡೆಸುತ್ತಿದೆ.

ಕಾಪು : ಪರಿಸರ ಮಾಲಿನ್ಯದ ಆರೋಪ ; ತವಕ್ಕಲ್ ಫಿಶ್ ಫ್ಯಾಕ್ಟರಿಗೆ ಬೀಗ – vishwanews24

ನೌಷದ್ ಪತ್ತೆಗಾಗಿ ಎನ್‌ಐಎ 2 ಲಕ್ಷ ರೂ. ಬಹುಮಾನ ಘೋಷಿಸಿತ್ತು. ಎನ್‌ಐಎ ಅಧಿಕಾರಿಗಳಿಗೆ ಬೆಳ್ತಂಗಡಿ ಪೊಲೀಸರು ಸಾಥ್ ನೀಡಿದ್ದಾರೆ. ಇನ್ನು ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜ್ಯದ 16 ಸ್ಥಳಗಳಲ್ಲಿ ಶೋಧ ನಡೆಸಲಾಗುತ್ತಿದೆ ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.

ಐಸಿಸ್ ಜಾಲಕ್ಕೆ ಪ್ರಹಾರ: ಕರ್ನಾಟಕ ಮತ್ತು ಮಹಾರಾಷ್ಟ್ರದ 44 ಸ್ಥಳಗಳಲ್ಲಿ ಎನ್‌ಐಎ ದಾಳಿ -  nia raids 44 locations in karnataka and maharashtra in isis conspiracy case  over terror attack - Vijay Karnataka

Leave a Reply