ಬೆಳ್ತಂಗಡಿ: ರಿಕ್ಷಾ ಚಾಲಕ ಆತ್ಮಹತ್ಯೆ ಪ್ರಕರಣಕ್ಕೆ ರೋಚಕ ತಿರುವು : ಪತಿಯ ಸಾವಿನ ಬಗ್ಗೆ ಅನುಮಾನ – ಪತ್ನಿಯಿಂದ ಪೊಲೀಸರಿಗೆ ದೂರು – Vishwanews24
ಬೆಳ್ತಂಗಡಿ: ರಿಕ್ಷಾ ಚಾಲಕ ಆತ್ಮಹತ್ಯೆ ಪ್ರಕರಣಕ್ಕೆ ರೋಚಕ ತಿರುವು : ಪತಿಯ ಸಾವಿನ ಬಗ್ಗೆ ಅನುಮಾನ – ಪತ್ನಿಯಿಂದ ಪೊಲೀಸರಿಗೆ ದೂರು
ಬೆಳ್ತಂಗಡಿ: ಕೆರೆಗೆ ಹಾರಿ ಅಟೋ ಚಾಲಕ ಆತ್ಮಹತ್ಯೆ ಪ್ರಕರಣಕ್ಕೆ ಇದೀಗ ರೋಚಕ ತಿರುವು ಸಿಕ್ಕಿದೆ. ರಿಕ್ಷಾ ಚಾಲಕ ಪ್ರವೀಣ್ ಸಾವಿನ ಬಗ್ಗೆ ಅವರ ಪತ್ನಿ ಅನುಮಾನ ವ್ಯಕ್ತಪಡಿಸಿದ್ದಾರೆ. ತನ್ನ ಪತಿಯ ಸಾವಿನ ಬಗ್ಗೆ ಹಲವಾರು ಅನುಮಾನಗಳಿದ್ದು ಈಬಗ್ಗೆ ತನಿಖೆ ನಡೆಸುವಂತೆ ಮೃತ ಪ್ರವೀಣ್ ಪಿಂಟೋ ಅವರ ಪತ್ನಿ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಅವರು ನೀಡಿದ ದೂರಿನಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರವೀಣ್ ಪತ್ನಿ ನೀಡಿರುವ ದೂರು :
ಗುರುವಾಯನಕೆರೆಯಲ್ಲಿ ರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿರುವ ಪ್ರವೀಣ್ ಪಿಂಟೋ ಅವರು ಮಂಗಳವಾರ ರಾತ್ರಿ ಮನೆಯಿಂದ ಓಡಿಲ್ನಾಳ ಗ್ರಾಮದ ಅಮರ್ ಜಾಲ್ ಎಂಬಲ್ಲಿಗೆ ಮೆಹಂದಿ ಕಾರ್ಯಕ್ರಮಕ್ಕೆಂದು ಹೋಗಿದ್ದರು.
ಆತ ಮನೆಗೆ ಬಾರದಿದ್ದಾಗ ಪತ್ನಿ ಕರೆಮಾಡಿದಾಗ ರಾತ್ರಿ 1.39ಕ್ಕೆ ತಾನು ಮನೆಗೆ ಬರುತ್ತೇನೆ ಎಂದು ತಿಳಿಸಿದ್ದರು, ಆದರೆ ಮನೆಗೆ ಹಿಂತಿರುಗಿರಲಿಲ್ಲ. ಬಳಿಕ ಬುಧವಾರ ಬೆಳಿಗ್ಗೆ ಪ್ರವೀಣನ ಡ್ರೈವಿಂಗ್ ಲೈಸನ್ಸ್ ಹಾಗೂ ದಾಖಲೆಗಳು ಕೆರೆಯ ಸಮೀಪ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ ಎಂದು ಅವರ ಪತ್ನಿ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಶಸ್ತ್ರಚಿಕಿತ್ಸೆಗಾಗಿ ಸಿದ್ದರಾಮಯ್ಯ ಆಸ್ಪತ್ರೆಗೆ ದಾಖಲು – Vishwanews24
ಮೆಹಂದಿ ಮನೆಯಲ್ಲಿ ಪ್ರವೀಣ್ ಹಾಗೂ ಪ್ರದೀಪ್ ಶೆಟ್ಟಿ ಎಂಬವರ ಮಧ್ಯೆ ಮಾತಿನ ಚಕಮಕಿ ಹಾಗೂ ಹೊಡೆದಾಟ ನಡೆದಿರುವ ವಿಚಾರ ಬಳಿಕ ತಿಳಿದು ಬಂದಿರುವುದಾಗಿಯೂ ರಾತ್ರಿ 3 ಗಂಟೆಯ ಸುಮಾರಿಗೆ ತಮ್ಮ ಮನೆಯ ಸಮೀಪ ಕಾರೊಂದು ಬಂದು ಹೋಗಿರುವುದಾಗಿಯೂ, ಮೃತದೇಹದಲ್ಲಿ ಪ್ರವೀಣ್ ಧರಿಸಿದ್ದ ಕೆಂಪು ಟೀ ಶರ್ಟ್ ಇರಲಿಲ್ಲ ಎಂದೂ ಅವರು ದೂರಿದ್ದಾರೆ.
ಇದರಿಂದಾಗಿ ಪ್ರವೀಣ್ ಅವರ ಅಸಹಜ ಸಾವಿನ ಬಗ್ಗೆ ಹಲವಾರು ಅನುಮಾನವಿದ್ದು ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಮೃತನ ಪತ್ನಿ ರೇಷ್ಮಾ ಬೆಳ್ತಂಗಡಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮಾಹಿತಿ ನೀಡಿದ್ದಾರೆ.
ಪೊಲೀಸರಿಂದ ತನಿಖೆ ಆರಂಭ;
ಈ ದೂರಿನ ಆಧಾರದ ಮೇರೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರಂಭದಲ್ಲಿ ಇದೊಂದು ಆತ್ಮಹತ್ಯೆ ಪ್ರಕರಣ ಎಂಬ ಮಾಹಿತಿಗಳು ಹೊರ ಬಂದಿತ್ತು. ಸ್ನೇಹಿತರಿಗೆ ಕರೆ ಮಾಡಿ ಹೇಳಿದ್ದ ಎಂದೂ ಹೇಳಲಾಗಿತ್ತು. ಆದರೆ ಇದೀಗ ಪ್ರಕರಣದ ಬಗ್ಗೆ ಹಲವಾರು ಅನುಮಾನಗಳು ಸೃಷ್ಟಿಯಾಗಲಾರಂಭಿಸಿದೆ.
ಹೊರ ರಾಜ್ಯಗಳಿಂದ ಬರುವ ಕಾರ್ಮಿಕರ ಮಾಹಿತಿ ಸಂಗ್ರಹ ಕಡ್ಡಾಯ : ಉಡುಪಿ ಎಸ್ಪಿ – Vishwanews24
ಪೊಲೀಸರು ಈ ಎಲ್ಲಾ ವಿಚಾರಗಳನ್ನೂ ಗಮನದಲ್ಲಿಟ್ಟುಕೊಂಡು ಇದೀಗ ತನಿಖೆ ಆರಂಭಿಸಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಮಂಗಳೂರಿನಲ್ಲಿ ನಡೆಸಲಾಗಿದ್ದು ಇದರಿಂದ ಹೆಚ್ಚಿನ ಮಾಹಿತಿಗಳು ಲಭಿಸುವ ನಿರೀಕ್ಷೆಯಿದೆ
