ಬೆಳ್ತಂಗಡಿ : ವಿದ್ಯುತ್ ಕಾಮಗಾರಿ ವೇಳೆ ಶಾಕ್ ತಗುಲಿ ಕಂಬದಲ್ಲೇ ಸಿಬ್ಬಂದಿ ಮೃತ್ಯು -Vishwanews24
ಬೆಳ್ತಂಗಡಿ : ವಿದ್ಯುತ್ ಕಾಮಗಾರಿ ವೇಳೆ ಶಾಕ್ ತಗುಲಿ ಕಂಬದಲ್ಲೇ ಸಿಬ್ಬಂದಿ ಮೃತ್ಯು -Vishwanews24
ಬೆಳ್ತಂಗಡಿ: ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಸಂದರ್ಭದಲ್ಲಿ ವಿದ್ಯುತ್ ಶಾಕ್ ತಗುಲಿ ಓರ್ವ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಕಾಯರ್ತಡ್ಕ ಕಳೆಂಜ ಬಳಿಯ ಶಾಲೆತ್ತಡ್ಕ ಜಂಕ್ಷನ್‌ನಲ್ಲಿ ನಡೆದಿದೆ.
ಮೂಡುಬಿದ್ರೆಯ ಖಾಸಗಿ ವಿದ್ಯುತ್ ಗುತ್ತಿಗೆದಾರ ಸಂಸ್ಥೆಯ ಸಿಬ್ಬಂದಿ ಪ್ರತಾಪ್ ಮೂಡುಬಿದ್ರೆ (20) ಮೃತಪಟ್ಟವರು.
ಇನ್ನು ಪ್ರತಾಪ್ ವಿದ್ಯುತ್ ಅವಘಡದಿಂದ ಕಂಬದಲ್ಲೇ ಮೃತಪಟ್ಟಿದ್ದು, ಜೊತೆಗಿದ್ದ ನಾಗಪ್ಪ ಮೂಡುಬಿದ್ರೆ ಹಾಗೂ ಕಿಶೋರ್ ಮೂಡುಬಿದ್ರೆ ಇವರುಗಳಿಗೆ ಗಾಯಗಳಾಗಿವೆ.
ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಕೆಲಸ ನಡೆಯುತ್ತಿತ್ತು. ಈ ವೇಳೆ ವಿದ್ಯುತ್ ಕಂಬದಲ್ಲಿ ಪ್ರತಾಪ್ ಕೆಲಸ ನಿರ್ವಹಿಸುತ್ತಿದ್ದರು. ಆಗ ವಿದ್ಯುತ್ ತಂತಿಯಲ್ಲಿ ವಿದ್ಯುತ್ ಪ್ರವಹಿಸಿದ್ದರಿಂದ ಪ್ರತಾಪ್ ಕಂಬದಲ್ಲೇ ಮೃತಪಟ್ಟಿದ್ದಾರೆ.
