ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬೆಂಗಳೂರಿನ ಉದ್ಯಮಿಯಿಂದ ಬೃಹತ್ ಘಂಟೆ ಕೊಡುಗೆ – vishwanews24
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬೆಂಗಳೂರಿನ ಉದ್ಯಮಿಯಿಂದ ಬೃಹತ್ ಘಂಟೆ ಕೊಡುಗೆ
ಬೆಳ್ತಂಗಡಿ: ಶಿವರಾತ್ರಿಯ ಪರಮ ಪವಿತ್ರ ದಿನದಂದು ಶಿವನ ಜಾಗರಣೆ ಮಾಡುವುದು ವಿಶೇಷ. ಸಮುದ್ರಮಥನವಾದಾಗ ಒಳ್ಳೆಯ ವಸ್ತುಗಳು ಬಂದಾಗ ಎಲ್ಲರೂ ಸ್ವೀಕರಿಸಲು ಮುಂದಿದ್ದರು. ಆದರೆ ವಿಷವನ್ನು ಶಿವ ಕುಡಿದು ಲೋಕವನ್ನು ಕಾಪಾಡುತ್ತಾನೆ. ಇದಕ್ಕಾಗಿ ಶಿವನನ್ನು ಬಹಳ ಭಕ್ತಿಯಿಂದ ಆರಾಧಿಸುತ್ತಾರೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ನುಡಿದರು.
ಬೆಂಗಳೂರಿನ ಸದಾಶಿವನಗರದ ಉದ್ಯಮಿ ದಿನೇಶ್ ಹಾಗೂ ಸುನೀತಾ ದಂಪತಿ ಕೊಡಮಾಡಿದ ಬೃಹತ್ ಗಾತ್ರದ ಘಂಟೆಯನ್ನು ಧರ್ಮಸ್ಥಳ ಅಣ್ಣಪ್ಪ ಬೆಟ್ಟದ ಮುಂಭಾಗದಲ್ಲಿ ಸ್ಥಾಪಿಸಲಾಗಿದ್ದು, ಅದನ್ನು ಫೆ.26ರಂದು ಉದ್ಘಾಟಿಸಿ ಅವರು ಮಾತನಾಡಿದರು.
ಉದ್ಯಮಿ ದಿನೇಶ್ ಮಾತನಾಡಿ, ಸಣ್ಣ ವಯಸ್ಸಿನಿಂದ ನಾನು ಧರ್ಮಸ್ಥಳಕ್ಕೆ ಬರುತ್ತಿದ್ದೆ. ದೇಗುಲಕ್ಕೆ ಏನಾದರು ಕೊಡುಗೆ ನೀಡಬೇಕೆಂಬ ನೆಲೆಯಲ್ಲಿ ಘಂಟೆಯನ್ನು ನೀಡಿದ್ದೇನೆ. ಶಿವರಾತ್ರಿಯಂದು ಉದ್ಘಾಟನೆಯಾಗಿರುವುದು ಬಹಳ ಸಂತೋಷ ನೀಡಿದೆ ಎಂದರು.
ಉದ್ಯಮಿ ಆಪ್ತರಾದ ಪ್ರಸಾದ್, ರವೀಂದ್ರ, ವಿಜಯ್ ಕುಮಾರ್, ಪತ್ನಿ ಸುನೀತಾ, ಧರ್ಮಸ್ಥಳದ ಎ.ವೀರು ಶೆಟ್ಟಿ ಸಹಿತ ಕ್ಷೇತ್ರದ ಪ್ರಮುಖರು ಉಪಸ್ಥಿತರಿದ್ದರು.
ವಿಶೇಷತೆ
-5 ಕ್ವಿಂಟಾಲ್ ತೂಕದ ಗಂಟೆ
-10 ಲಕ್ಷ ರೂ. ಒಟ್ಟು ವೆಚ್ಚ
-ಲಕ್ನೋದಲ್ಲಿ 20 ದಿನಗಳಲ್ಲಿ ನಿರ್ಮಾಣ
-ಕಲ್ಲಿನ ವೃತ್ತ ಹಾಗೂ ಕಂಬದಿಂದ ಘಂಟೆ ಜೋಡಣೆ
ಉಡುಪಿ: ರಾಜ್ಯ ಸರಕಾರದ ವಿರುದ್ಧ ಫೆ.28ರಂದು ಬಿಜೆಪಿ ಪ್ರತಿಭಟನೆ – vishwanews24
