ಬೆಳ್ತಂಗಡಿ ಸೇತುವೆ ಪುನಃ ನಿರ್ಮಾಣ ಕಾಮಗಾರಿ: ಸಂಚಾರ ಮಾರ್ಗ ಬದಲಾವಣೆ – vishwanews24

Featured, ದಕ್ಷಿಣ ಕನ್ನಡ

ಬೆಳ್ತಂಗಡಿ ಸೇತುವೆ ಪುನಃ ನಿರ್ಮಾಣ ಕಾಮಗಾರಿ: ಸಂಚಾರ ಮಾರ್ಗ ಬದಲಾವಣೆ

ಮಂಗಳೂರು: ಬೆಳ್ತಂಗಡಿ ತಾಲೂಕಿನ ಉಜಿರೆ-ಇಂದಬೆಟ್ಟು ಜಿಲ್ಲಾ ಮುಖ್ಯ ರಸ್ತೆಯಲ್ಲಿನ 1.10 ಕಿ.ಮೀ.ನಲ್ಲಿ ಬರುವ ಅಂಬಡಬೆಟ್ಟು ಎಂಬಲ್ಲಿ ಸೇತುವೆ ಪುನರ್ ನಿರ್ಮಾಣ ಕಾಮಗಾರಿಯ ಸಂಬಂಧ 2027ರ ಜನವರಿ 6 ರವರೆಗೆ ಈ ಸೇತುವೆಯಲ್ಲಿ ಎಲ್ಲಾ ವಾಹನಗಳ ಸಂಚಾರವನ್ನು ನಿರ್ಬಂದಿಸಿ ಮಾರ್ಗ ಬದಲಾವಣೆ ಮಾಡಿ ಸಂಚರಿಸಲು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಆದೇಶಿಸಿದ್ದಾರೆ.

*ಬದಲಿ ಮಾರ್ಗಗಳು: ಉಜಿರೆ ಜನಾರ್ಧನ ಸ್ವಾಮಿ ದೇವಸ್ಥಾನದ ದ್ವಾರದಿಂದ-ಸೂರ್ಯ ದೇವಸ್ಥಾನ ಮಾರ್ಗವಾಗಿ – ಕೇಳ್ತಜೆ ಮುಖಾಂತರ ಸಂಚರಿಸಬೇಕು. ಬೆಳ್ತಂಗಡಿ-ಕಿಲ್ಲೂರು ಕಾಜೂರು ರಸ್ತೆಯ ಇಂದಬೆಟ್ಟು ಗ್ರಾಮದಿಂದ ನೇತ್ರಾವತಿ ಎಸ್‌ಟಿ ಕಾಲೊನಿ ಮಾರ್ಗವಾಗಿ ಬೆಳ್ಳೂರು ಕ್ರಾಸ್ ರಸ್ತೆಯಾಗಿ ರಾಜ್ಯ ಹೆದ್ದಾರಿ 276ರ ರಸ್ತೆಯಾದ ಸುಳ್ಯ ಪೈಚಾರು ಬೆಳ್ಳಾರೆ ಸವಣೂರು ಕುದ್ಮಾರು ಅಲಂಕಾರು ಸುರುಳಿ ಮಾದೇರಿ ಪಟ್ರಮೆ ಧರ್ಮಸ್ಥಳ ಮುಂಡಾಜೆ ದಿಡುಪೆ ರಸ್ತೆಯನ್ನು ಸಂಪರ್ಕಿಸಬೇಕು.

ಅನುಮತಿ ಇಲ್ಲದೆ ವ್ಯಕ್ತಿಯೊಬ್ಬರ ಖಾಸಗಿ ಚಿತ್ರ ಹಂಚಿಕೊಂಡರೆ ತಕ್ಷಣ ಎಫ್‌ಐಆರ್ ಗೆ ಆದೇಶ – vishwanews24

Leave a Reply