ಬೆಳ್ತಂಗಡಿ :  19 ವರ್ಷದ ಗರ್ಭಿಣಿ ಮಹಿಳೆ ಹೃದಯಾಘಾತಕ್ಕೆ ಬಲಿ – Vishwanews24

Featured, ದಕ್ಷಿಣ ಕನ್ನಡ

ಬೆಳ್ತಂಗಡಿ :  19 ವರ್ಷದ ಗರ್ಭಿಣಿ ಮಹಿಳೆ ಹೃದಯಾಘಾತಕ್ಕೆ ಬಲಿ

ಬೆಳ್ತಂಗಡಿ :ಗರ್ಭಿಣಿ ಮಹಿಳೆ ಹೃದಯಾಘಾತಕ್ಕೆ ಬಲಿಯಾದ ದಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಕಲ್ಮಂಜ ಆದರ್ಶ ನಗರದಲ್ಲಿ ನಡೆದಿದೆ.

ಆದರ್ಶ ನಗರದ ಹಮೀದ್‌, ನಝೀಮರವರ 2ನೇ ಪುತ್ರಿ ನಿಶ್ಬಾ (19) ಹೃದಯಾಘಾತದಿಂದ ತಮ್ಮ ಗಂಡನ ಮನೆಯಲ್ಲಿ ನಿಧನರಾಗಿದ್ದಾರೆ. ಮೃತ ನಿಶ್ಬಾ ಕುಂಟಿನಿ ನಿವಾಸಿ ಖಾಲಿದ್‌ ಉಸ್ಮಾನ್‌ ಅವರ ಸೊಸೆಯಾಗಿದ್ದು ಇವರಿಗೆ ಮದುವೆಯಾಗಿ 9 ತಿಂಗಳಾಗಿದ್ದು, ಇವರು 4 ತಿಂಗಳ ಗರ್ಭಿಣಿಯಾಗಿದ್ದರು ಎಂದು ವರದಿಯಾಗಿದೆ.

ಕಾರ್ಕಳ : ಪರಶುರಾಮ ಥೀಂ ಪಾರ್ಕ್ ಕೇಸ್‌: ಕಾಂಗ್ರೆಸ್ ಮುಖಂಡರ ವಿರುದ್ದ ದಾಖಲಾದ ಪ್ರಕರಣಕ್ಕೆ ಹೈಕೋರ್ಟ್ ತಡೆ – Vishwanews24

ಸಣ್ಣ ಪ್ರಾಯದ ಮಹಿಳೆಯರಿಗೆ ಹೃದಯಾಘಾತ ಸಂಭವಿಸುವುದು ತೀರಾ ಅಪರೂಪವಾಗಿದೆ. ಮಹಿಳೆಯರು ಮೆನೋಪಾಸ್ ಆಗುವ ತನಕ ಅವರು ಹೃದಯ ಸಂಬಂಧಿ ಕಾಯಿಲೆಗಳಿಂದ ಬಹುತೇಕ ಮುಕ್ತರು ಎಂದು ವೈದ್ಯಲೋಕ ಹೇಳುತ್ತಿದೆ. ಅದರಲ್ಲೂ ಗರ್ಭವತಿ ಮಹಿಳೆಯರು ಅತ್ಯಂತ ಸುರಕ್ಷಿತರು ಎಂದೂ ನಂಬಲಾಗಿತ್ತು. ಆದರೆ ಸಣ್ಣ ಪ್ರಾಯದ ಈ ಬಸುರಿಯ ಅನಿರೀಕ್ಷಿತ ಸಾವು ಕುಟುಂಬಸ್ಥರನ್ನು ಆತಂಕಕ್ಕೆ ದೂಡಿದೆ.

ಮುಸ್ಲಿಂ ಬಾಂಧವರಿಗೆ ‘ರಂಜಾನ್’ ಶುಭಾಶಯ ಕೋರಿದ ಸಿಎಂ – Vishwanews24

Leave a Reply