ಬೇಟೆಗೆ ತೆರಳಿದ್ದಾಗ ಬಂದೂಕಿನಿಂದ  ಮಿಸ್ ಫೈರ್ : ಎದೆಗೆ ಗುಂಡು ತಗುಲಿ ವ್ಯಕ್ತಿ ಸಾವು – vishwanews24

Featured, ರಾಜ್ಯ ನ್ಯೂಸ್

ಬೇಟೆಗೆ ತೆರಳಿದ್ದಾಗ ಬಂದೂಕಿನಿಂದ  ಮಿಸ್ ಫೈರ್ : ಎದೆಗೆ ಗುಂಡು ತಗುಲಿ ವ್ಯಕ್ತಿ ಸಾವು

ಚಿಕ್ಕಮಗಳೂರು: ಬೇಟೆಗೆ ತೆರಳಿದ್ದಾಗ ಬಂದೂಕಿನಿಂದ  ಮಿಸ್ ಫೈರ್  ಆಗಿ ವ್ಯಕ್ತಿಯೊಬ್ಬನ ಎದೆಗೆ ಗುಂಡು ತಗುಲಿ ಸಾವನ್ನಪ್ಪಿದ ಘಟನೆ ತಾಲೂಕಿನ ಉಳುವಾಗಿಲು ಗ್ರಾಮದಲ್ಲಿ ನಡೆದಿದೆ.

ಗುಂಡೇಟಿನಿಂದ ಮೃತಪಟ್ಟ ವ್ಯಕ್ತಿಯನ್ನು ಸಂಜಯ್ (35) ಎಂದು ಗುರುತಿಸಲಾಗಿದೆ. ಮೃತ ಸಂಜಯ್ ಕೆರಮಕ್ಕಿ ಗ್ರಾಮದವನಾಗಿದ್ದು, ಸ್ನೇಹಿತರಾದ ನಿಸರ್ಗ ಮತ್ತು ಸುಮನ್ ಎಂಬವರ ಜೊತೆ ಕಾಡು ಹಂದಿಯ ಶಿಕಾರಿಗೆ ತೆರಳಿದ್ದರು. ಈ ವೇಳೆ ಈ ದುರ್ಘಟನೆ ನಡೆದಿದೆ.

ಪಾಳು ಮನೆಯಲ್ಲಿ 5 ಅಸ್ಥಿಪಂಜರ ಪತ್ತೆ ಪ್ರಕರಣ : ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆ – Vishwanews24

ಈ ಸಂಬಂಧ ಪೊಲಿಸರು ನಿಸರ್ಗ ಮತ್ತು ಸುಮನ್ ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಚುನಾವಣೆ ಹಿನ್ನೆಲೆ ಬಂದೂಕನ್ನು ಪೊಲೀಸ್ ಠಾಣೆಯಲ್ಲಿ ಠೇವಣಿ ಮಾಡಬೇಕು ಎಂಬ ನಿಯಮವಿದೆ. ಆದರೂ ಯುವಕರು ನಿಯಮವನ್ನು ಗಾಳಿಗೆ ತೂರಿ ಬಂದೂಕನ್ನು ಇಟ್ಟುಕೊಂಡಿದ್ದರು. ಅಲ್ಲದೇ ಅಕ್ರಮವಾಗಿ ಶಿಕಾರಿಗೆ ತೆರಳಿದ್ದರು. ಘಟನೆ ನಡೆದ ತಕ್ಷಣ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದು, ಈ ವೇಳೆ ಬಿದ್ದು ನಿಸರ್ಗ ಎಂಬಾತನ ಕೈ ಮೂಳೆ ಮುರಿದಿದೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಮಲ್ಲಂದೂರು ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಟ್ವಾಳ: ದ್ವಿಚಕ್ರ ವಾಹನಕ್ಕೆ ಜೀಪ್ ಢಿಕ್ಕಿ ; ಸವಾರ ಗಂಭೀರ ಗಾಯ – vishwanews24

Leave a Reply