ಬೇಡವೆಂದರೂ ಕಾಂಗ್ರೆಸ್ನವರೇ ನಮಗೆ ಸಿಎಂ ಪಟ್ಟ ಬಿಟ್ಟುಕೊಟ್ರು : ಹೊಸ ಬಾಂಬ್ ಸಿಡಿಸಿದ ದೊಡ್ಡಗೌಡರು
ನಾನು ಜನತೆಯ ಮುಲಾಜಿನಲ್ಲಿಲ್ಲ, ನಾನು ಕಾಂಗ್ರೆಸ್ ಸರ್ಕಾರದ ಮುಲಾಜಿನಲ್ಲಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದ್ದ ಬೆನ್ನಲ್ಲೇ ಜೆಡಿಎಸ್ ವರಿಷ್ಠ ದೇವೇಗೌಡರು ಹೊಸ ಬಾಂಬ್ ಸಿಡಿಸಿದ್ದಾರೆ.
ಮಂತ್ರಿ ಪದವಿ, ಮುಖ್ಯಮಂತ್ರಿ ಪದವಿಗಾಗಿ ಜೆಡಿಎಸ್ ಯಾವುದೇ ಬೇಡಿಕೆ ಇಟ್ಟಿರಲಿಲ್ಲ. ಸಿಎಂ ಸ್ಥಾನವನ್ನು ಕೂಡಾ ಕುಮಾರಸ್ವಾಮಿ ಅವರು ಕಾಂಗ್ರೆಸ್ಸಿಗೆ ಬಿಟ್ಟುಕೊಡಲು ಸಿದ್ಧರಿದ್ದರು. ಆದರೆ ನೀವೇ ಮುಖ್ಯಮಂತ್ರಿಯಾಗಿ ಎಂದು ಕಾಂಗ್ರೆಸ್ಸಿನ ಹೈಕಮಾಂಡ್ ಅವರೇ ದುಂಬಾಲು ಬಿದ್ದಿದ್ದರು. ಆದ್ದರಿಂದ ಸಿಎಂ ಸ್ಥಾನದಲ್ಲಿ ಕುಮಾರಸ್ವಾಮಿ ಕೂರಬೇಕಾಯಿತು ಎಂದಿದ್ದಾರೆ.
ಫಲಿತಾಂಶ ಬಂದ ಮೇಲೆ ಯಾರು ಮೈತ್ರಿಗಾಗಿ ಮೊದಲು ಕೈ ಚಾಚಿದ್ದು ಎಂಬುದು ಲೋಕಕ್ಕೆ ಗೊತ್ತಿದೆ. ಅಧಿಕಾರಕ್ಕೆ ಆಸೆ ಪಟ್ಟು ಸರ್ಕಾರ ರಚನೆಗೆ ನಾವು ಮುಂದಾಗಿಲ್ಲ. ಮೈತ್ರಿ ಬಗ್ಗೆ ನಮ್ಮ ಜತೆ ಮಾತುಕತೆಗೆ ಮುಂದಾದಾಗ, ಕಾಂಗ್ರೆಸ್ಸಿನಿಂದ ಯಾರಾದರೂ ಸಿಎಂ ಆಗಲಿ ನಾವು ಬೆಂಬಲ ನೀಡುತ್ತೇವೆ ಎಂದು ಹೇಳಿದ್ದೆ ಎಂದಿದ್ದಾರೆ.
