ಬೈಕಂಪಾಡಿ : ಹೋರಿಯ ಕಣ್ಣಿಗೆ ಕುಕ್ಕುತ್ತಿದ್ದ ಕೊಂಬು ಕಡಿದು ಯಶಸ್ವೀ ಚಿಕಿತ್ಸೆ ನೀಡಿದ ಬಜರಂಗ ದಳ ಯುವಪಡೆ – Vishwanews24

Featured, ದಕ್ಷಿಣ ಕನ್ನಡ

ಬೈಕಂಪಾಡಿ : ಹೋರಿಯ ಕಣ್ಣಿಗೆ ಕುಕ್ಕುತ್ತಿದ್ದ ಕೊಂಬು ಕಡಿದು ಯಶಸ್ವೀ ಚಿಕಿತ್ಸೆ ನೀಡಿದ ಬಜರಂಗ ದಳ ಯುವಪಡೆ

ಮಂಗಳೂರು : ಅದು ಒಂದು ಮೂಕ ಜೀವಿ..ಕಳೆದ ಕೆಲ ವರ್ಷಗಳಿಂದ ತನ್ನ ಒಡಲಲ್ಲಿ ಅಗಾಧ ನೋವನ್ನು ಇಟ್ಟುಕೊಂಡು ನರಕ ಯಾತನೆ ಪಡುತಿತ್ತು. ನೇರವಾಗಿರಬೇಕಾಗಿದ್ದ ಕೊಂಬು ಬಾಗಿ ಕಣ್ಣಿಗೆ ಕುಕ್ಕಿ ಅದರಿಂದ ಗಾಯಗೊಂಡು ನೋವಿನಿಂದ ಬಳಲುತ್ತಾ ಸದಾ ಕಣ್ಣೀರು ಸುರಿಸುತ್ತಲೇ ಅಸಹಾಯಕ ಸ್ಥಿತಿಯಲ್ಲಿತ್ತು ಆಜೀವ.

ಆದರೆ ಇದೀಗ ಸಾಮಾಜಿಕ ಕಾರ್ಯಕರ್ತೆಯ ಕರೆಗೆ ಸ್ಪಂದಿಸಿದ ಬಜರಂಗದಳ ಉತ್ಸಾಹಿ ಯುವಕಪಡೆ ಆ ಮುಗ್ದ ಜೀವಿಯ ಕಣ್ಣೀರು ಓರೆಸುವ ಕಾರ್ಯ ಮಾಡಿದೆ.

ಇದರ ಹೆಸರು ರಾಜ. ಮಂಗಳೂರು ಹೊರವಲಯದ ಪಣಂಬೂರು- ಬೈಕಂಪಾಡಿ ಪ್ರದೇಶಗಳಲ್ಲಿ ಕಳೆದ ಕೆಲ ವರ್ಷಗಳಿಂದ ಬೀಡು ಬಿಟ್ಟಿರುವ ಈ ಹೋರಿ ಇತ್ತೀಚಿನ ದಿನಗಳಿಂದ ತೀರ ನರಕಮಯ ಯಾತನೆಯನ್ನು ಅನುಭವಿಸುತ್ತಿತ್ತು.

ತನ್ನ ತಲೆಯಲ್ಲಿ ನೇರವಾಗಿ ಬೆಳೆಯ ಬೇಕಾಗಿದ್ದ ಒಂದು ಕೊಂಬು ಯಾವುದೋ ಅಪಘಾತದಲ್ಲಿ ಬಾಗಿ ತನ್ನದೇ ಕಣ್ಣಿಗೆ ಕುಕ್ಕುತ್ತಿತು. ಇದರಿಂದ ಉಂಟಾಗುತಿದ್ದ ಅಗಾದ ನೋವನ್ನು ತಡೆಯಲಾಗದೇ ರಾಜ ಹೋರಿ ಅಸಾಹಾಯಕ ಸ್ಥಿತಿಯಲ್ಲಿ ಒದ್ದಾಡುತ್ತಿತು.

ಶಿವಮೊಗ್ಗ:  ಸಮೀರ್ ತಂಗಿಯನ್ನು ಚುಡಾಯಿಸಿದ್ದಕ್ಕೆ ಭಜರಂಗದಳ ಕಾರ್ಯಕರ್ತನ ಹತ್ಯೆಗೆ ಯತ್ನ : ಎಸ್​ಪಿ ಜಿ.ಕೆ.ಮಿಥುನ್ ಕುಮಾರ್ – Vishwanews24

ಹಲವಾರು ಬಾರಿ ಸಾಮಾಜಿಕ ಜಾಲಾ ತಾಣ, ಮಾದ್ಯಮಗಳ ಮೂಲಕ ಮಾಡಿದ ಮನವಿಗೆ ಹೋರಿಯನ್ನು ಈ ಯಾತನೆಯಿಂದ ಮುಕ್ತಿ ಮಾಡುವ ಪ್ರಯತ್ನಗಳನ್ನು ಮಾಡಲಾಗಿತ್ತಾದರೂ ಅದು ಸಫಲತೆ ಕಂಡಿರಲಿಲ್ಲ.ಆದರೆ ಈ ಹೋರಿ ಯಾರನ್ನೂ ಹತ್ತಿರ ಹೋಗಲು ಬಿಡುತ್ತಿರಲಿಲ್ಲವಾದ್ದರಿಂದ ಅದನ್ನು ಹಿಡಿಯುವುದು ಒಂದು ಸವಾಲಾಗಿತ್ತು.ಹಾಗಾಗಿ ಅದರ ಬೆಂಡಾದ ಕೊಂಬು ಸಮಸ್ಯಾತ್ಮಕವಾಗಿಯೇ ಉಳಿದಿತ್ತು. ಈ ಮೂಕ ಪ್ರಾಣಿಯ ವೇದನೆ ಸಾಮಾಜಿಕ ಜಾಲ ತಾಣದಲ್ಲಿ ಇದೀಗ ಮತ್ತೆ ವೈರಲ್‌ ಆಗಿತ್ತು.

ಪ್ರಾಣಿ ಪ್ರಿಯೆ ಉಷಾ ಸುವರ್ಣರು ಹೋರಿಯ ಸಹಾಯಕ್ಕೆ ಜಾಲಾ ತಾಣಗಳ ಮೂಲಕ ಮನವಿ ಮಾಡಿದ್ದರು.ಇದಕ್ಕೆ ಸ್ಪಂದಿಸಿದ ಬಜರಂಗ ದಳ ಸಂಘಟನೆಯ ಕಾರ್ಯಕರ್ತರು , ಉತ್ಸಾಹಿ ಧೈರ್ಯವಂತ ಯುವಕರ ಪಡೆಯೊಂದಿಗೆ ಪಣಂಬೂರು- ಬೈಕಂಪಾಡಿ ಪ್ರದೇಶದಲ್ಲಿ ಮುಂಜಾನೆಯಿಂದ ಹಲವು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಹಗ್ಗದ ಸಹಾಯದಿಂದ ಹೋರಿಯನ್ನು ಸೆರೆ ಹಿಡಿಯುವ ಸಾಹಸಕ್ಕೆ ಕೈ ಹಾಕಿ ಕೊನೆಗೂ ಯಶಸ್ವಿಯಾದರು.

ಪಶು ವೈದ್ಯರನ್ನು ಕರೆಸಿ ಅವರ ಸಹಾಯದಿಂದ ಹೊರಿಯ ನೋವಿಗೆ ಕಾರಣವಾಗಿದ್ದ ಕಣ್ಣಿಗೆ ಬಾಗಿದ್ದ ಕೊಂಬನ್ನು ಕತ್ತರಿಸಿ ಯಶಸ್ವೀ ಚಿಕಿತ್ಸೆ ಒದಗಿಸಿದರು.

ಮಂಗಳೂರು : ಕನ್ನಡದ ಖ್ಯಾತ ಸಾಹಿತಿ ಸಾರಾ ಅಬೂಬಕ್ಕರ್ ನಿಧನ – Vishwanews24

ಪಶು ಸಂಗೋಪನಾ ಇಲಾಖೆಯ ದಕ್ಷಿಣ ಕನ್ನಡ ಜಿಲ್ಲಾ ಉಪ ನಿರ್ದೇಶಕ ಡಾ। ಅರುಣ್‌ ಶೆಟ್ಟಿ ಅವರ ನಿರ್ದೇಶನದಲ್ಲಿ ನಿವೃತ್ತ ಪಶು ವೈದ್ಯಾಧಿಕಾರಿ ಡಾ। ಸುರೇಶ್‌ ಮತ್ತು ಇಲಾಖೆಯ ಸೀನಿಯರ್‌ ಇನ್ಸ್‌ಪೆಕ್ಟರ್‌ ವಿಶ್ವನಾಥ ಕುಳಾಯಿ ಅವರು ಈ ಕಾರ್ಯಾಚರಣೆಯಲ್ಲಿ ಸಹಕರಿಸಿದ್ದರು.

ಇದರಿಂದಾಗಿ ಈ ಬೀಡಾಡಿ ಬಸವ ಕಳೆದ ಕೆಲವು ವರ್ಷಗಳಿಂದ ಅನುಭವಿಸುತ್ತಿದ್ದ ನೋವಿನ ಸಮಸ್ಯೆಯಿಂದ ಮುಕ್ತಿ ದೊರೆತಿದೆ.ಬಜರಂಗ ದಳದ ಯುವಕರ ಪ್ರಾಣಿ ಪ್ರೇಮಕ್ಕೆ ಸಾರ್ವತ್ರಿಕ ಮೆಚ್ಚುಗೆ ವ್ಯಕ್ತವಾಗಿದೆ.

Leave a Reply