ಬೈಕ್‌ ಮತ್ತು ರಿಕ್ಷಾ ನಡುವೆ ಭೀಕರ ಅಪಘಾತ : ಬೈಕ್‌ ಸವಾರ ದಾರುಣ ಸಾವು

Featured, ದಕ್ಷಿಣ ಕನ್ನಡ

ಬಂಟ್ವಾಳ, : ರಿಕ್ಷಾ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟಿರುವ ದಾರುಣ ಘಟನೆ ಬಂಟ್ವಾಳದ ಕೊಳಕೆ ಎಂಬಲ್ಲಿ ನಡೆದಿದೆ.

ಕೊಳಕೆ ಪೆರ್ವ ನಿವಾಸಿ ಮನ್ವಿತ್ ಮೃತಪಟ್ಟವರಾಗಿದ್ದಾರೆ. ಅಪಘಾತದಿಂದ ಗಂಭೀರ ಗಾಯಗೊಂಡಿದ್ದ ಮನ್ವಿತ್‌ರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ನಿರ್ಜನ ಪ್ರದೇಶವಾಗಿದ್ದರಿಂದ ಆಟೋ ರಿಕ್ಷಾ ಬೈಕ್‌ಗೆ ಡಿಕ್ಕಿ‌ಯಾಗಿ ಬಳಿಕ ಪರಾರಿಯಾಗಿತ್ತು. ಬಳಿಕ ಸಾರ್ವಜನಿಕರ ನೆರವಿನಿಂದ ಅಟೋ ರಿಕ್ಷಾವನ್ನು ಪತ್ತೆ ಹಚ್ಚಲಾಗಿದೆ.‌ ಬೈಕ್ ಸವಾರ ಕೊಳಕೆ ಪೆರ್ವ ನಿವಾಸಿ ಮನ್ವಿತ್ ಗಂಭೀರ ಗಾಯಗೊಂಡಿದ್ದರು. ಶೀಘ್ರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ‌

ಈ ಸಂಬಂಧ ಬಂಟ್ವಾಳ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ.