ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಆದ ಅವಮಾನದ ವಿಷಯವಾಗಿ ರಾಜಕೀಯ ವ್ಯವಸ್ಥೆಯ ಬಗ್ಗೆ ಖಂಡನೆ : ಬಿಲ್ಲವರ ಪರಿಷತ್ತು ಉಡುಪಿ ಜಿಲ್ಲೆ : vishwanews24
ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಆದ ಅವಮಾನದ ವಿಷಯವಾಗಿ ರಾಜಕೀಯ ವ್ಯವಸ್ಥೆಯ ಬಗ್ಗೆ ಖಂಡನೆ : ಬಿಲ್ಲವರ ಪರಿಷತ್ತು ಉಡುಪಿ ಜಿಲ್ಲೆ vishwanews24
ಕಾಪು: ಒಂದೇ ಜಾತಿ ಒಂದೇ ಮತ ಒಬ್ಬನೇ ದೇವರು ಎಂಬ ಸತ್ಯ ಸಂದೇಶ ಪ್ರತಿಪಾದಕರಾದ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಅವಕಾಶ ನೀಡದಿರುವುದರ ಕುರಿತು ಸಮಾಜದ ಸಂಘಟನೆಗಳು ಖಂಡಿಸಬೇಕಾಗಿದೆ ಪ್ರತಿ ಚುನಾವಣೆ ಬಂದಾಗ ನಮ್ಮ ನಾರಾಯಣಗುರುಗಳು ನಮ್ಮ ನಾರಾಯಣ ಗುರುಗಳು ಎಂದು ರಾಜಕೀಯ ಕೋಸ್ಕರ ಹೇಳುವ ರಾಜಕೀಯ ಪುಡಾರಿಗಳಿಗೆ ನಾವು ಪಾಠ ಕಲಿಸಬೇಕಾಗಿದೆ ಎಂದು ಉಡುಪಿ ಬಿಲ್ಲವ ಪರಿಷತ್ ಅಧ್ಯಕ್ಷ ನವೀನ್ ಅಮೀನ್ ತಿಳಿಸಿದರು.
ಹಿಂದೊಮ್ಮೆ ಲೇಡಿಹಿಲ್ ವೃತ್ತದ ವಿಷಯವಾಗಿ ಚರ್ಚೆಯು ಮುನ್ನಲೆಗೆ ಬಂದಾಗ ಒಂದು ಪಕ್ಷದ ನಾಯಕರು ಅವರ ಪಕ್ಷದ ಪರವಾಗಿ ಮಾತನಾಡಿದರು.ಈಗ ನಾರಾಯಣಗುರುಗಳ ಸ್ತಬ್ಧಚಿತ್ರದ ವಿಚಾರ ಬರುವಾಗ ಇನ್ನೊಂದು ಪಕ್ಷದ ನಾಯಕರು ತಮ್ಮ ಪಕ್ಷದ ಬಗ್ಗೆ ಮಾತನಾಡುತ್ತಿದ್ದಾರೆ.ಎರಡು ವಿಷಯದಲ್ಲಿ ಅವರವರ ಪಕ್ಷದ ಮೇಲಿನ ಪ್ರೀತಿ ಅವರಿಗೆ ಮುಖ್ಯ ಹೊರತು ನಾರಾಯಣಗುರುಗಳ ತತ್ವ ಮತ್ತು ಸಿದ್ಧಾಂತದ ವಿಷಯವಲ್ಲ. ಹಿಂದುತ್ವದ ವಿಚಾರ ಬಂದಾಗ ಸಮಾಜದ ಹಲವು ಹಿಂದೂ ಸಂಘಟನೆಗಳು ದೊಡ್ಡ ಮಟ್ಟಿನ ಪ್ರತಿಭಟನೆ ಮಾಡುತ್ತವೆ ಆದರೆ ನಾರಾಯಣಗುರುಗಳ ವಿಚಾರ ಬಂದಾಗ ಆ ಸಂಘಟನೆಗಳದ್ದು ದಿವ್ಯ ಮೌನ ನಾರಾಯಣ ಗುರುಗಳು ಹಿಂದುತ್ವದ ವಿಚಾರಧಾರೆಯ ಅಡಿಯಲ್ಲಿ ಬರುವುದಿಲ್ಲವೇ…? ಹಿಂದೂ ಸಂಘಟನೆಗಳ ಈ ಮೌನ ಸೋಜಿಗವೇ ಸರಿ. ಸದ್ರಿ ವಿಷಯದ ಬಗ್ಗೆ ಹಲವಾರು ರಾಜಕೀಯ ನಾಯಕರು ತಮ್ಮ ಮೂಗಿನ ನೇರಕ್ಕೆ ಮಾತನಾಡುತ್ತಾರೆ. ಅದರಲ್ಲಿ ಹೆಚ್ಚಿನ ನಾಯಕರು ಮನೆಯಲ್ಲಿ ನಾರಾಯಣಗುರುಗಳ ಭಾವಚಿತ್ರವನ್ನಿಟ್ಟು ಪೂಜೆ ಮಾಡಿದವರಲ್ಲ. ನಾರಾಯಣಗುರುಗಳ ಜೀವನದ ಸಂದೇಶವನ್ನು ಅರಿತವರಲ್ಲ ಆದರೂ ತಮ್ಮ ತಮ್ಮ ಬೇಳೆ ಬೇಯಿಸಿಕೊಳ್ಳಲು ಮಾತನಾಡುತ್ತಾರೆ ಎಲ್ಲವೂ ರಾಜಕೀಯ ಕ್ಕೋಸ್ಕರ ಮಾಡುವ ಕೆಲಸ ಹೀಗಾಗಿ ರಾಜಕೀಯ ರಹಿತವಾಗಿ ನಾರಾಯಣ ಗುರುಗಳಿಗೆ ಗೌರವ ಸಲ್ಲಿಸಲು ಸಮಾಜದ ಪ್ರತಿ ಸಂಘ- ಸಂಸ್ಥೆಗಳಲ್ಲಿ ವಿನಂತಿಯೇನೆಂದರೆ 26/01/2021ನೇ ಬುಧವಾರ ಗಣರಾಜ್ಯೋತ್ಸವ ದಿನದಂದು ಪ್ರತಿ ಸಂಘ ಮಂದಿರಗಳು ನಾರಾಯಣ ಗುರುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಮೌನ ಪ್ರತಿಭಟನೆಯ ಮೂಲಕ ಹಾಗೂ ತಮ್ಮ ತಮ್ಮ ವಾಟ್ಸಪ್ ಡಿಪಿಯಲ್ಲಿ ನಾರಾಯಣ ಗುರುಗಳ ಭಾವಚಿತ್ರವನ್ನು ಅಳವಡಿಸುವುದರ ಮೂಲಕ ಪ್ರತಿಭಟಿಸಬೇಕು . ಮತ್ತು ಅಂದು ಸಂಜೆ 5.00ಗಂಟೆಗೆ ಕಟಪಾಡಿ ವಿಶ್ವನಾಥ ಕ್ಷೇತ್ರದಲ್ಲಿ ನಡೆಯುವ ವಿಶೇಷ ಪೂಜೆಯಲ್ಲಿ ತಾವೆಲ್ಲರೂ ಭಾಗವಹಿಸಿ ಮೌನ ಪ್ರತಿಭಟನೆ ಯೊಂದಿಗೆ ನಾರಾಯಣಗುರುಗಳ ತತ್ವ ಆದರ್ಶವನ್ನು ಪಾಲಿಸೋಣ ಎಂದು ಬಿಲ್ಲವರ ಪರಿಷತ್ತು ಉಡುಪಿ ಜಿಲ್ಲೆ ಇದರ ಅಧ್ಯಕ್ಷರಾದ ನವೀನ್ ಅಮೀನ್ ಅವರ ಪತ್ರಿಕಾ ಪ್ರಕಟಣೆ ತಿಳಿಸಿದರು.

