ಬ್ಲಾಸ್ಟ್ ಪ್ರಕರಣವನ್ನು ರಾಜ್ಯ ಸರ್ಕಾರ ಎನ್ಐಎ ಗೆ ವಹಿಸಬೇಕು : ಸಿ.ಟಿ.ರವಿ ಆಗ್ರಹ – Vishwanews24
ಬೆಂಗಳೂರಿಗೆ ಬಾಂಬ್ ಬೆದರಿಕೆ ಎದುರಾಗಿದೆ , ಕರ್ನಾಟಕ ಭಯೋತ್ಪಾದಕರ ಟ್ರೈನಿಂಗ್ ಸೆಂಟರ್ ಆಗಿದೆ: ಸಿ.ಟಿ ರವಿ
ಚಿಕ್ಕಮಗಳೂರು: ಬೆಂಗಳೂರಿನಲ್ಲಿ ನಡೆದ ಬ್ಲಾಸ್ಟ್ ಪ್ರಕರಣವನ್ನು ರಾಜ್ಯ ಸರ್ಕಾರ ಎನ್ಐಎ ಗೆ ವಹಿಸಬೇಕು ಎಂದು ಮಾಜಿ ಸಚಿವ ಸಿ.ಟಿ.ರವಿ ಆಗ್ರಹಿಸಿದರು.
ಶನಿವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಈಗ ಉತ್ತರದಲ್ಲಿ ಬಾಂಬ್ ಸದ್ದು ಕ್ಷೀಣವಾಗಿದೆ. ದಕ್ಷಿಣದ ಕೇರಳ, ಕರ್ನಾಟಕದಲ್ಲಿ ಬಾಂಬ್ ಸದ್ದು ಕೇಳಿಸುತ್ತಿದೆ. ಬ್ಯಾಂಡ್ ಬೆಂಗಳೂರಿಗೆ ಬಾಂಬ್ ಬೆದರಿಕೆ ಎದುರಾಗಿದೆ ಎಂದರು.
ಬೆಂಗಳೂರಿನಲ್ಲಿ ನಿನ್ನೆ ನಡೆದ ಬಾಂಬ್ ಬ್ಲಾಸ್ಟ್ ಪರೀಕ್ಷಾರ್ಥ ಸ್ಫೋಟ ಮಾಡಿರುವ ಸಂಶಯವಿದೆ. ಇದು ಸರಣಿ ಸ್ಪೋಟದ ಮುನ್ಸೂಚನೆ ಇರಬಹುದು ಎಂದರು.
ಅಬುಧಾಬಿ ಹಿಂದೂ ದೇವಾಲಯ – ಭಕ್ತರಿಗೆ ಮಾರ್ಗಸೂಚಿ ಪ್ರಕಟ – Vishwanews24
ಸರ್ಕಾರ ಇಡೀ ಪ್ರಕರಣವನ್ನು ಎನ್ಐಎಗೆ ವಹಿಸಬೇಕು. ಭಯೋತ್ಪಾದಕರು ಕರ್ನಾಟಕ ಸ್ಲೀಪರ್ ಸೆಲ್ ಮಾಡಿಕೊಂಡಿದ್ದು ಹೊಸದಲ್ಲ. ಕರ್ನಾಟಕ ಟ್ರೈನಿಂಗ್ ಸೆಂಟರ್ ಆಗಿ ಬಳಸಿಕೊಂಡಿದ್ದಾರೆ ಎಂದು ಹೇಳಿದರು.
