ಭಂಡಾರಿ ಮನೆ ಮುಂದೆ ಅಳಲು ತೋಡಿಕೊಂಡ ಬೂತು ಮಟ್ಟದ ಕಾರ್ಕಳ ಕಾಂಗ್ರೆಸ್ ಕಾರ್ಯಕರ್ತರು, ಸೀಟ್ ಬಿಟ್ಟು ಕೊಟ್ಟು ಕಾರ್ಕಳದಲ್ಲಿ ಕಾಂಗ್ರೆಸ್ ಉಳಿಸಿಯೆಂದು ವಿನಂತಿ.

Featured, ಉಡುಪಿ

ಕಾರ್ಕಳ :  ರಾಜಕೀಯ ವಲಯವನ್ನು ತಲ್ಲಣಗೊಳಿಸಿದ್ದ ಕಾಂಗ್ರೆಸ್ ನಾಯಕ ಮುನಿಯಾಲ್ ಉದಯ್ ಕುಮಾರ್ ಶೆಟ್ಟಿಗೆ ಸೀಟ್ ಬಿಟ್ಟು ಕೊಡುವಂತೆ ೧೫೦ ಕ್ಕೂ ಹೆಚ್ಚಿನ ಬೂತ್ ಪ್ರಮುಖರು ಇಂದು ಬೆಳಗ್ಗೆ ಗೋಪಾಲ ಭಂಡಾರಿ ಮನೆಗೆ ಭೇಟಿ ನೀಡಿ ” ಭಂಡಾರಿಯವರೇ ನಾವು ಇಷ್ಟು ವರ್ಷ ನಿಮ್ಮ ಜತೆ ಪಕ್ಷಕ್ಕಾಗಿ ಮತ್ತು ನಿಮಗಾಗಿ ಕಾರ್ಕಳದಲ್ಲಿ ದುಡಿದಿದ್ದೇವೆ. ನೀವು ಮಾತ್ರ ಹರ್ಷ ಮೊಯ್ಲಿ ಗೆ ಸೀಟ್ ಬಿಟ್ಟು ಕೊಡಲು ತಯಾರಿದ್ದೀರಿ ಆದರೆ ನಿಮ್ಮ ಅಪ್ಪಟ ಶಿಷ್ಯ ಮುನಿಯಾಲ್ ಉದಯ್ ಕುಮಾರ್ ಗೆ ಸೀಟ್ ಬಿಟ್ಟು ಕೊಡಲು ತಯಾರಿಲ್ಲ,ನೀವಂತೂ ಈ ಸಲ ಕಾರ್ಕಳದಲ್ಲಿ ಗೆಲುವು ಸಾಧಿಸಲು ಸಾದ್ಯವಿಲ್ಲ ಮತ್ತು ನಾವು ನಿಮ್ಮನ್ನು ಬೆಂಬಲಿಸುವುದಿಲ್ಲ , ನೀವು ದಯಮಾಡಿ ಉದಯ್ ಶೆಟ್ಟಿಗೆ ಸೀಟ್ ಬಿಟ್ಟುಕೊಟ್ಟು, ಪಕ್ಷದ ವರಿಷ್ಠರಾದ ವಿರಪ್ಪ ಮೊಯ್ಲಿಗೆ ಮನವರಿಕೆ ಮಾಡಿ, ಬಿ ಫಾರಮ್ ಶೆಟ್ರಿಗೆ ನೀಡಿ , ಇಲ್ಲಿ ನೀವು ಕಾಪಾಡಿಕೊಂಡು ಬಂದ ನಿಮ್ಮ ಘಣತೆ ಮತ್ತು ಗೌರವವನ್ನು ಉಳಿಸಿಕೊಳ್ಳಿ ಹಾಗೂ ಕಾರ್ಕಳದಲ್ಲಿ ಕಾಂಗ್ರೆಸ್ ನ ಅಭೂತಪೂರ್ವ ಗೆಲುವಿನಲ್ಲಿ ಸಹಕರಿಸಿ ಮತ್ತು ಪಕ್ಷ ಸಂಘಟನೆಗೆ ಕೈ ಜೋಡಿಸಿ ಎಂದರು. ಒಂದು ವೇಳೆ ನೀವು ಹಠಮಾಡಿ ನಾಮಪತ್ರ ಸಲ್ಲಿಸಿದ್ದೆ ಆದಲ್ಲಿ ೧೫೦ ಕ್ಕೂ ಹೆಚ್ಚಿನ ಕಡೆಯಲ್ಲಿ ಒಂದೇ ಒಂದು ಬೂತ್ ಹಾಕಲು ಬಿಡುವುದಿಲ್ಲವೆಂದು ಗೋಪಾಲ ಭಂಡಾರಿ ಮುಂದೆ ಆಗ್ರಹಿಸಿ ಪಕ್ಷದ ಹಲವಾರು ಮಂದಿ ಕಾರ್ಯಕರ್ತರು ಅಳಲು ತೋಡಿಕೊಂಡರು.