ಭಟ್ಕಳ: ಯುವತಿ ಜೊತೆ ಅಸಭ್ಯ ವರ್ತನೆ – ಪೊಲೀಸರ ಕರ್ತವ್ಯಕ್ಕೆ ಅಡ್ಡಿ ; ಪ್ರಕರಣ ದಾಖಲು – Vishwanews24
ಭಟ್ಕಳ: ಯುವತಿ ಜೊತೆ ಅಸಭ್ಯ ವರ್ತನೆ – ಪೊಲೀಸರ ಕರ್ತವ್ಯಕ್ಕೆ ಅಡ್ಡಿ ; ಪ್ರಕರಣ ದಾಖಲು
ಭಟ್ಕಳ: ತಡರಾತ್ರಿ ರಂಜಾನ್ ಮಾರುಕಟ್ಟೆಯಲ್ಲಿ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದನ್ನು ಪ್ರಶ್ನಿಸಲು ಹೋದವರೊಂದಿಗೆ ವಾಗ್ವಾದ ಮಾಡುತ್ತಿದ್ದವರನ್ನು ನಿಯಂತ್ರಿಸಲು ಹೋದ ಪೊಲೀಸರನ್ನೇ ತರಾಟೆಗೆ ತೆಗೆದುಕೊಂಡಿದ್ದಲ್ಲದೇ, ಪೊಲೀಸ್ ಜೀಪಿಗೆ ಹಾನಿ ಮಾಡಿರುವ ಕುರಿತು ಭಟ್ಕಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ತಡರಾತ್ರಿ ಯುವತಿಯೋರ್ವಳಿಗೆ ಕಿರುಕುಳ ನೀಡಿದ್ದಾರೆನ್ನಲಾದ ಹದ್ಲೂರಿನ ಚಂದ್ರು ಸೋಮಯ್ಯ ಗೊಂಡ ಎಂಬವನನ್ನು ಸುತ್ತುವರೆದು ಕೆಲ ಯುವಕರು ಗಲಾಟೆ ಮಾಡುತ್ತಿರುವುದನ್ನು ಕಂಡು ಸ್ಥಳದಲ್ಲಿದ್ದ ಪೊಲೀಸರು ನಿಯಂತ್ರಿಸಲು ಮುಂದಾದರು.
ಈ ಸಮಯದಲ್ಲಿ ಇನ್ನಷ್ಟು ಜನ ಸೇರುತ್ತಿದ್ದಂತೆಯೇ ಪೊಲೀಸರು ಜೀಪಿನಲ್ಲಿ ಆರೋಪಿಯನ್ನು ಹಾಗೂ ಆತನೊಂದಿಗೆ ವಾಗ್ವಾದ ನಡೆಸುತ್ತಿದ್ದ ಮೊಹಮ್ಮದ್ ಮೀರಾನ್ ಎಂಬವನನ್ನು ಕರೆದೊಯ್ಯಲು ಮುಂದಾದಾಗ ಅಲ್ಲಿ ಸೇರಿದ್ದ ಜನರು ಜೀಪನ್ನು ಅಡ್ಡಗಟ್ಟಿದ್ದಲ್ಲದೇ ಕಲ್ಲು ತೂರಾಟ ನಡೆಸಿದ್ದರಿಂದ ಜೀಪಿಗೆ ಹಾನಿಯಾಗಿದೆ ಎನ್ನಲಾಗಿದೆ.
ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಶಿವಕುಮಾರ್ ನಾಮಪತ್ರ ಅಂಗೀಕಾರ – Vishwanews24
ತಕ್ಷಣ ಜಾಗೃತರಾದ ಪೊಲೀಸರು ಆರೋಪಿಗಳನ್ನು ಠಾಣೆಗೆ ಕರೆ ತಂದು, ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕುರಿತು ಐವರು ಹಾಗೂ ಇನ್ನಿತರರ ಮೇಲೆ ಪ್ರಕರಣ ದಾಖಲಿಸಿಕೊಂಡು ರಾತ್ರಿಯೇ ಮೂವರನ್ನು ವಶಕ್ಕೆ ಪಡೆದರು. ನಂತರ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದು, ಉಳಿದಂತೆ ಮತ್ತೇ ಐವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಶಿವಕುಮಾರ್ ನಾಮಪತ್ರ ಅಂಗೀಕಾರ – Vishwanews24
