ಭರ್ಜರಿಯಾಗಿ ಮುನ್ನುಗ್ಗುತ್ತಿರುವ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ; ಈಗ ಅರಬ್ ನಲ್ಲೂ ಶುರುವಾಗಲಿದೆ ಇದರ ಹವಾ..
ಬೆಂಗಳೂರು, : ಇದೇ 26ಕ್ಕೆ ಕುವೈತ್ ಸೇರಿದಂತೆ ಇನ್ನು ಹಲವಾರು ಕಡೆಗಳಲ್ಲಿ ರಿಶಬ್ ಶೆಟ್ಟಿಯ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾ ಬಿಡುಗಡೆಯಾಗಲಿದೆ.
ರಿಶಬ್ ಶೆಟ್ಟಿ ಅವರ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ ಸದ್ಯ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಈಗಾಗಲೇ ಈ ಸಿನಿಮಾವನ್ನು ಜನ ಅಪ್ಪಿಕೊಂಡಿದ್ದಾರೆ. ಪ್ರತಿಯೊಂದು ದೃಶ್ಯಗಳು ಕೂಡ ನೈಜ ಘಟನೆಗಳಿಗೆ, ಶಾಲಾ ದಿನಗಳಿಗೆ ಹೋಲಿಕೆಯಾಗುವಂತಿದೆ. ಹೊರ ರಾಜ್ಯದಲ್ಲೂ ಕಮಾಲ್ ಮಾಡುತ್ತಿರುವ ಸಿನಿಮಾ ಇದೀಗ ಅರಬ್ ದೇಶಗಳಲ್ಲಿ ಬಿಡುಗಡೆಯಾಗಿಲು ಸಿದ್ದವಾಗಿದೆ.
ಹೌದು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಅಲ್ಲಿನ ಸರ್ಕಾರಿ ಶಾಲೆಗಳ ಚಿತ್ರಣವನ್ನು ಬಿಚ್ಚಿಡುವ ಸಿನಿಮಾ ಇದಾಗಿದ್ದು, ರಾಜ್ಯದೆಲ್ಲೆಡೆ ಎಲ್ಲರ ಗಮನವನ್ನು ಸೆಳೆದಿದೆ. ಸದ್ಯ ಈ ಸಿನಿಮಾ ಕರ್ನಾಟಕ ಅಷ್ಟೆ ಅಲ್ಲದೆ ಅಮೇರಿಕಾದಲ್ಲೂ ಬಿಡುಗಡೆಯಾಗಿ ಅಲ್ಲಿನ ಕನ್ನಡಿಗರ ಜೊತೆಗೆ ಫಾರಿನ್ ಮಂದಿಯ ಗಮನ ಸೆಳೆದಿತ್ತು. ಇದೀಗ ಈ ಸಿನಿಮಾ ದುಬೈ, ಅಬುದಾಬಿ, ಓಮನ್ ಸೇರಿದಂತೆ ಹಲವಾರು ಕಡೆ ಬಿಡುಗಡೆಯಾಗಿದೆ. ಇನ್ನು, ಇದೇ 26ಕ್ಕೆ ಮತ್ತಷ್ಟು ಕಡೆಗಳಲ್ಲಿ ಬಿಡುಗಡೆಯಾಗಲು ಸಜ್ಜಾಗುತ್ತಿದೆ.
