ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರೇ ಕಾಂಗ್ರೆಸ್ ನವರು ‘ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಮೋದಿ ಇನ್ನೂ ಹುಟ್ಟಿರಲಿಲ್ಲ:ಮಲ್ಲಿಕಾರ್ಜುನ ಖರ್ಗೆ -Vishwanews24
ಯಾದಗಿರಿ : ಭಾರತ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರೇ ಕಾಂಗ್ರೆಸ್ ನವರು, ದೇಶಕ್ಕಾಗಿ ಬಿಜೆಪಿಯ ಒಂದು ನಾಯಿಯೂ ಸತ್ತಿಲ್ಲ. ಇಂಥವರು ನಮಗೆ ದೇಶಭಕ್ತಿಯ ಪಾಠ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಯಾದಗಿರಿಯಲ್ಲಿ ಮಾತನಾಡಿದ ಖರ್ಗೆ, ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಮೋದಿ ಇನ್ನೂ ಹುಟ್ಟಿರಲಿಲ್ಲ, ದೇಶದ ಸ್ವಾತಂತ್ರ್ಯದ ಬಗ್ಗೆ ಮೋದಿಗಿಂತ ಹೆಚ್ಚು ನನಗೆ ಗೊತ್ತು, ಮೋದಿ ನನಗಿಂತ ವಯಸ್ಸಿನಲ್ಲಿ ಚಿಕ್ಕವನು, ನಾನು ಕೆಲಸ ಮಾಡಿ ಮತ ಕೇಳುತ್ತಿದ್ದೇನೆ, ಬೇರೆಯವರ ತರಹ ಉಡಾಫೆಯಾಗಿ ಮತ ಕೇಳುತ್ತಿಲ್ಲ ಎಂದಿದ್ದಾರೆ.
ಇನ್ನು ಬಿಜೆಪಿ ಸೇರಿರುವ ಬಾಬುರಾವ್ ಚಿಂಚನಸೂರ, ಎ.ಬಿ. ಮಾಲಕ ರೆಡ್ಡಿ, ಉಮೇಶ್ ಜಾಧವ್ ವಿರುದ್ಧ ವಾಗ್ದಾಳಿ ನಡೆಸಿದ ಖರ್ಗೆ, ಈ ಹಿಂದೆ ನನ್ನನ್ನು ಇಂದ್ರ, ಚಂದ್ರ ಅಂದವರೇ ನನ್ನನ್ನು ಬೈಯುತ್ತಿದ್ದಾರೆ. ಹಳ್ಳಿಯಿಂದ ದಿಲ್ಲಿವರೆಗೆ ನನಗೆ ಸೋಲಿಸಲು ಸಂಚು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.ನನ್ನನ್ನು ಸೋಲಿಸಲು ಸೋತವರು ಸಂಘ ಮಾಡಿಕೊಂಡಿದ್ದಾರೆ. ಅವರೇ ಗೆದ್ದಿಲ್ಲ, ಇನ್ನು ನನ್ನನ್ನು ಸೋಲಿಸಲು ಸಾಧ್ಯವಾ? ಎಂದು ಟೀಕಿಸಿದ್ದಾರೆ.
ಕೆಲವರು ಕುಣಿದು ಕುಣಿದು ಮಾತನಾಡಬಹುದು. ಕುಣಿಯೋರಿಂದ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಬಾಬುರಾವ್ ಚಿಂಚನಸೂರು ಕುರಿತು ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದ್ದಾರೆ.
