ಭಾರತದ ಸಾಮಾಜಿಕ ಜಾಲತಾಣ ಕೂ ಆ್ಯಪ್ ಸ್ಥಗಿತ – vishwanews24

Featured, ರಾಜ್ಯ ನ್ಯೂಸ್

ಭಾರತದ ಸಾಮಾಜಿಕ ಜಾಲತಾಣ ಕೂ ಆ್ಯಪ್ ಸ್ಥಗಿತ

ಬೆಂಗಳೂರು: ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಎಕ್ಸ್‌ಗೆ ಪ್ರತಿಸ್ಪರ್ಧಿಯಾಗಿ ಹುಟ್ಟಿಕೊಂಡಿದ್ದ ಭಾರತೀಯ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಕೂ ಅನ್ನು ಮುಚ್ಚಲಾಗುತ್ತಿದೆ ಎಂದು ಅದರ ಸಂಸ್ಥಾಪಕ ಅಪ್ರಮೇಯ ರಾಧಾಕೃಷ್ಣ ಅವರು ಲಿಂಕ್ಡ್‌ಇನ್‌ನಲ್ಲಿ ಬುಧವಾರ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಡೈಲಿಹಂಟ್ ಸೇರಿದಂತೆ ಅನೇಕ ಕಂಪನಿಗಳೊಂದಿಗೆ ಸಂಭಾವ್ಯ ಮಾರಾಟ ಅಥವಾ ವಿಲೀನಕ್ಕಾಗಿ ಹಲವಾರು ಸುತ್ತಿನ ಮಾತುಕತೆಗಳು ವಿಫಲವಾದ ನಂತರ ಈ ನಿರ್ಧಾರ ಹೊರಬಿದ್ದಿದೆ.

ಹತ್ರಾಸ್‌ ದುರಂತ : ಮೃತರ ಕುಟುಂಬಗಳಿಗೆ ತಲಾ 4 ಲಕ್ಷ, ಗಾಯಾಳುಗಳಿಗೆ ತಲಾ 1 ಲಕ್ಷ ; ಪ್ರಕರಣ ಎಸ್‌ಐಟಿ ತನಿಖೆಗೆ : ಯೋಗಿ ಆದಿತ್ಯನಾಥ್‌ – vishwanews24

“ಕೂ ಅನ್ನು ಮಾರುವ ಅವರ ಸತತ ಪ್ರಯತ್ನಗಳು ಫಲಕೊಡದೇ ಹೋದ್ದರಿಂದ ಅಂತಿಮವಾಗಿ ವಿದಾಯ ಹೇಳಲಾಗಿದೆ. ಸೋಷಿಯಲ್ ಮೀಡಿಯಾ ತಾಣವನ್ನು ನಿರ್ವಹಿಸಲು ಬಹಳವೇ ವೆಚ್ಚವಾಗುತ್ತದೆ. ಹೆಚ್ಚು ದಿನ ಇದನ್ನು ಮುಂದುವರಿಸಲು ಆಗುವುದಿಲ್ಲ ಎಂದು Koo ಸಂಸ್ಥಾಪಕರಾದ ಅಪ್ರಮೇಯ ರಾಧಾಕೃಷ್ಣ ಮತ್ತು ಮಯಾಂಕ್ ಬಿಡವಟ್ಕಾ ಅವರು ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ಬುಧವಾರ ಬರೆದಿದ್ದಾರೆ.

content-img

ಇದರೊಂದಿಗೆ ಭಾರತದ ಏಕೈಕ ಸೋಷಿಯಲ್ ಮೀಡಿಯಾ ಆ್ಯಪ್ ಎಂಬ ಹೆಗ್ಗಳಿಕೆಯಲ್ಲಿದ್ದ ಕೂ ಧ್ವನಿ ನಿಂತಂತಾಗಿದೆ.

ಮಂಗಳೂರು: ಪತಿಯ ಹತ್ಯೆ ಪ್ರಕರಣ ; ಪತ್ನಿ ಸಹಿತ ಐವರಿಗೆ ಜೀವಾವಧಿ ಶಿಕ್ಷೆ – vishwanews24

Leave a Reply