ಭಾರತವನ್ನು ವಿಭಜನೆ ಮಾಡಲು ಯತ್ನಿಸುತ್ತಿರುವ ಶಕ್ತಿಗಳ ವಿರುದ್ಧ ಹೋರಾಡುವುದನ್ನು ಕಾಂಗ್ರೆಸ್ ಪಕ್ಷ ನಿಲ್ಲಿಸಬಾರದು : ಸೋನಿಯಾ ಗಾಂಧಿ -Vishwanews24

Featured, ರಾಷ್ಟ್ರ ನ್ಯೂಸ್

ನವದೆಹಲಿ: ಭಾರತವನ್ನು ವಿಭಜನೆ ಮಾಡಲು ಯತ್ನಿಸುತ್ತಿರುವ ಶಕ್ತಿಗಳ ವಿರುದ್ಧ ಹೋರಾಡುವುದನ್ನು ಕಾಂಗ್ರೆಸ್ ಪಕ್ಷ ನಿಲ್ಲಿಸಬಾರದು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಹಾಳು ಮಾಡಲು ಯತ್ನಿಸುತ್ತಿರುವವರ ವಿರುದ್ಧ ಪ್ರತಿರೋಧವಾಗಿ ನಾವು ನಿಲ್ಲಬೇಕಿದೆ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದರು.

ಜಾಹಿರಾತು

ರಾಜೀವ್ ಗಾಂಧಿ ಅವರಿಗೆ 1984ರ ಸಾರ್ವತ್ರಿಕ ಚುನಾವಣೆಯಲ್ಲಿ ಸಿಕ್ಕ ಬಹುಮತವನ್ನು ಅವರು ಭಯದ ವಾತಾವರಣ ಸೃಷ್ಟಿಸಲು ಹಾಗೂ ಜನರ ಸ್ವಾತಂತ್ರ್ಯವನ್ನು ಹರಣ ಮಾಡಲು ಬಳಸಿರಲಿಲ್ಲ. ರಾಜೀವ್ ಗಾಂಧಿ ಅವರಿಗೆ ಸಿಕ್ಕ ಬಹುಮತವನ್ನು ಅವರು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅಪಮೌಲ್ಯಗೊಳಿಸಲು ಬಳಸಿರಲಿಲ್ಲ ಎಂದು ಹೇಳಿದರು.

ಭಾರತದ ವಿವಿಧತೆಯನ್ನು ಆಚರಿಸುವ ಮೂಲಕವೇ ಭಾರತದ ಒಗ್ಗಟ್ಟನ್ನು ಕಾಯ್ದುಕೊಳ್ಳಬಹುದು ಎಂದು ರಾಜೀವ್ ಗಾಂಧಿ ತೋರಿಸಿಕೊಟ್ಟಿದ್ದಾರೆ. ರಾಜೀವ್ ಗಾಂಧಿ ಪ್ರಧಾನಿ ಆಗಿದ್ದಾಗ ಮಾಡಿದ ಉತ್ತಮ ಕಾರ್ಯಗಳನ್ನು ಇನ್ನಾರು ಮಾಡಲಾರರು ಎಂದು ನುಡಿದರು.