ಭಾರತವಿಂದು ಸಂಪೂರ್ಣ ಗಣರಾಜ್ಯವಾಗಿದೆ,ಪ್ರತಿಯೊಬ್ಬ ದೇಶದ ನಾಗರೀಕ ಕೇಂದ್ರ ಸರಕಾರದೊಂದಿಗೆ ನಿಲ್ಲಬೇಕಿದೆ : ಶಾಸಕ ಲಾಲಾಜಿ ಆರ್ ಮೆಂಡನ್

Featured, ಉಡುಪಿ

Kapu: ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿ ಜೀ,  ಗೃಹ ಸಚಿವ ಅಮಿತ್ ಶಾ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್  ರವರ ನೇತೃತ್ವದಲ್ಲಿ ಮತ್ತೊಂದು ಮಾಸ್ಟರ್  ಸ್ಟ್ರೋಕ್ ದೇಶವೇ ಹೆಮ್ಮೆಪಡುವಂತಾಗಿದೆ, ಇಂತಹ ಇತಿಹಾಸಿಕ ನಿರ್ಧಾರಕ್ಕೆ ಅಭಿನಂದನೆಗಳು ಸಲ್ಲಲೇಬೇಕು.ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ (370-35A) ಕಾಂಗ್ರೆಸ್ ದೇಶಕ್ಕೆ ಕೊಟ್ಟಿದ್ದ ಕಳಂಕ ದೂರಾಗಿದೆ. ಜಮ್ಮು & ಕಾಶ್ಮೀರ ವಿಧಾನಭೆ ಒಳಗೊಂಡ ಕೇಂದ್ರಾಡಳಿತ ಪ್ರದೇಶ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶವಾಗಿ ರೂಪುಗೊಂಡಿದೆ. ದೇಶದ್ರೋಹಿಗಳ ಹಾಗೂ ಪ್ರತ್ಯೇಕವಾದಿಗಳ ಆಟಕ್ಕೆ ಬ್ರೇಕ್ ಬಿದ್ದಿದೆ. ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮಪಂಚಾಯತ್ ಗಳಲ್ಲಿ ತ್ರಿವರ್ಣ ಧ್ವಜ ರಾರಾಜಿಸಲಿದೆ. ಇವತ್ತು ಪ್ರತಿಯೊಬ್ಬ ದೇಶದ ನಾಗರೀಕ ಕೇಂದ್ರ ಸರಕಾರದೊಂದಿಗೆ ನಿಲ್ಲಬೇಕಿದೆ ಎಂದು ಕಾಪು ಶಾಸಕ‌ ಲಾಲಾಜಿಿ ಆರ್ ಮೆಂಡನ್ ಹೇಳಿದರು.